ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಿಗಂಧೂರು ದೇವಾಲಯದಲ್ಲಿ ಅಹಿತಕರ ಘಟನೆ ನಡೆದ ನಂತರ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯ ಮೊಟ್ಟ ಮೊದಲ ಸಭೆ ಇಂದು ನಡೆದಿದ್ದು, ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಶಿವಕುಮಾರ್, ಸಾಗರ ಶಾಸಕ ಹರತಾಳು ಹಾಲಪ್ಪ ಅವರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಏನು ಆ ನಿರ್ಧಾರಗಳು?
- ತಿಂಗಳಿಗೊಮ್ಮೆ ಮೇಲುಸ್ತುವಾರಿ, ಸಲಹಾ ಸಮಿತಿ ಸಭೆ ನಡೆಸಬೇಕು
- ದೇವಾಲಯಕ್ಕೆ ದಾನ ರೂಪದಲ್ಲಿ ಬರುವ ಹಣದ ಲೆಕ್ಕ ಇರಿಸಬೇಕು
- ಪಾರದರ್ಶಕತೆ ಕಾಪಾಡಲು ಭಕ್ತರಿಗೆ ಕೌಂಟರ್’ನಲ್ಲಿ ರಸೀದಿ ನೀಡಬೇಕು
- ದಾನ ಹಾಗೂ ಹರಕೆಯ ಹಣದ ಬಗ್ಗೆ ಜಿಲ್ಲಾಧಿಕಾರಿ, ಸಾಗರ ಉಪವಿಭಾಗಾಧಿಕಾರಿ ಅವರ ಮೂಲಕ ಲೆಕ್ಕ ಇರಿಸಬೇಕು
- ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ಟರು ಈ ಹಿಂದಿನಂತೆ ತಮ್ಮ ಧಾರ್ಮಿಕ ಕಾರ್ಯ ಮುಂದುವರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post