ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬ್ರಾಹ್ಮಣ ಸಮುದಾಯದ ಮಂದಿ ವಿಶ್ವಾಮಿತ್ರ ಹಾಗೂ ಅರುಂಧತಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕರೆ ನೀಡಿದರು.
ಬೆಂಗಳೂರಿನ ಪ್ರಚೇತಸ ಶ್ರೌತವಿದ್ಯಾ ಸಂವರ್ಧಿನಿ ವಿಶ್ವಸ್ತ ಮಂಡಳಿ ಹಾಗೂ ಮತ್ತೂರಿನ ಜಾನಕಿ ರಾಮಾಶ್ರಮ ಸಹಯೋಗದಲ್ಲಿ ಅಖಿಲ ಕರ್ನಾಟಕದ ರಾಜ್ಯ ಸ್ಥರದ ಅಗ್ನಿಹೋತ್ರಿಗಳ ಎರಡನೆಯ ವರ್ಷದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವಿಪ್ರ ಸಮುದಾಯದ ಅಭಿವೃದ್ಧಿಗಾಗಿ ಈ ಎರಡೂ ಯೋಜನೆಗಳನ್ನು ಆರಂಭಿಸಲಾಗಿದೆ. ಸಮುದಾಯದ ಮಂದಿ ಇದರ ಪ್ರಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಕೇವಲ 15 ಜನ ಅಗ್ನಿಹೋತ್ರಿಗಳಿದ್ದು, ಇವರ ಸಂಖ್ಯೆ ಹೆಚ್ಚಾಗಬೇಕು. ಅಗ್ನಿಹೋತ್ರಿಗಳು ಇರುವುದರಿಂದ ಕಲುಷಿತ ವಾತಾವರಣ ಕಡಿಮೆಯಾಗಿ, ಕಾಲ ಕಾಲಕ್ಕೆ ಮಳೆ ಬೆಳೆಯಾಗುತ್ತದೆ ಎಂದರು.
ಮೈಸೂರು ಅವಧೂತ ದತ್ತಪೀಢದ ವಂಶಿ ಕೃಷ್ಣ ಘನಪಾಠಿಗಳು, ಪ್ರಮುಖರಾದ ಭಾನುಪ್ರಕಾಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















