ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್-266 ವತಿಯಿಂದ 9 ಲಕ್ಷ ಬೆಲೆ ಬಾಳುವ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಎಚ್‌ಎಫ್‌ಎನ್‌ಸಿ ವೆಂಟಿಲೇಟರ್ ದೇಣಿಗೆ ನೀಡಲಾಯಿತು.
ಸಾರ್ವಜನಿಕರ ಉಪಯೋಗಕ್ಕಾಗಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಸಾಗರ ಸರ್ಕಾರಿ ಆಸ್ಪತ್ರೆಗೆ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಯಿತು.
ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಚರ‍್ಮನ ಮುಖ್ಯಸ್ಥ ಎಸ್.ಆರ್.ಆದರ್ಶ ಮಾತನಾಡಿ, ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ. ಸೇವೆ ಮಾಡುವ ಕೈಗಳು ಎಂದಿಗೂ ಸೋಲುವುದಿಲ್ಲ. ನಾವು ಮಾಡಿದ ಸೇವೆ ಮನುಕುಲಕ್ಕೆ ಸಾರ್ಥಕವಾಗಬೇಕು. ಇಂದು ದಾನಿಗಳ ಸಹಕಾರದಿಂದ ಹಾಗೂ ಸದಸ್ಯರ ಸಹಕಾರದಿಂದ ಇಂತಹ ವಿಷಮ ಸ್ಥಿತಿಯಲ್ಲಿ ತುಂಬಾ ಅವಶ್ಯಕವಾಗಿ ಸಮಾಜಕ್ಕೆ ಬೇಕಾಗಿರುವ ಹಾಗೂ ರೋಗಿಗಳ ಜೀವ ಉಳಿಸಲು ಅಗತ್ಯವಾಗಿ ಬಳಸುವ ಉತ್ತಮ ಗುಣಮಟ್ಟದ ಆಕ್ಸಿಜನ್ ಯಂತ್ರಗಳನ್ನು ನೀಡಿದ್ದೇವೆ ಎಂದು ಹೇಳಿದರು.
ಕೊರೋನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಸಮಸ್ಯೆ ಎದುರಿಸುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ಕೊರೋನಾ ಸೋಂಕಿತರಿಗೆ ವೈದ್ಯಕೀಯ ಸೇವೆ ಒದಗಿಸುವ ದೃಷ್ಠಿಯಿಂದ ಕರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಇದರಿಂದ ಜೀವ ಉಳಿಸಲು ನೆರವಾಗಿದೆ ಎಂದರು.
ರೌಂಡ್ ಟೇಬಲ್ ಏರಿಯಾ 13 ವೈಸ್ ಚರ‍್ಮನ್ ವಿನಯ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ದುರ್ಗಿಗುಡಿ, ಆಲ್ಕೋಳ, ಗುತ್ಯಪ್ಪ ಕಾಲನಿ, ಬೇಗುವಳ್ಳಿ ಸೇರಿದಂತೆ ಅನೇಕ ಶಾಲೆಗಳಲ್ಲಿ ಕ್ಲಾಸ್ ರೂಂ ಹಾಗೂ ಶೌಚಗೃಹಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸುತ್ತಿದ್ದೇವೆ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ರೋಟರಿ ವಲಯ 11 ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಎಂ.ರಾಜು, ಡಾ. ಮಲ್ಲಪ್ಪ, ಶಬರೀಶ್, ಸುಂದರರಾಜ್, ಶಬರೀಶ್‌ರಾಜ್, ಕಾರ್ತಿಕ್ ಮಲ್ಲಪ್ಪ, ಸಂಜಯ್‌ನಾಯರ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post