ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆ ರೇಖಾ ಅವರ ಆರೋಗ್ಯವನ್ನು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹಾಗೂ ಎಂಎಲ್’ಸಿ ಧನಂಜಯ ಸರ್ಜಿ #Dhananjaya Sarji ವಿಚಾರಿಸಿದರು.
ತಲೆಗೆ ಗಂಭೀರವಾಗಿ ಗಾಯವಾಗಿರುವ ರೇಖಾ ಅವರನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Also read: ಬ್ಲಾಕ್ ಮೇಲ್ ಪ್ರಕರಣ ಆರೋಪ | ನಿರೂಪಕಿ ದಿವ್ಯ ವಸಂತ ಅರೆಸ್ಟ್ | ಆಕೆ ಸಿಕ್ಕಿದ್ದೆಲ್ಲಿ ನೋಡಿ
ಇಂದು ಆಸ್ಪತ್ರೆಗೆ ತೆರಳಿ ರೇಖಾ ಅವರನ್ನು ಭೇಟಿಯಾದ ಇಬ್ಬರೂ ನಾಯಕರು, ಆರೋಗ್ಯ ವಿಚಾರಣೆ ನಡೆಸಿ ಧೈರ್ಯ ತುಂಬಿದರು. ಈ ವೇಳೆ ನಾರಾಯಣ ಹೃದಯಾಲಯದ ಸ್ಪೆಷಲಿಟಿ ಡೈರೆಕ್ಟರ್ ವರ್ಗೀಸ್, ನಾನ್ ಮೆಡಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀಕಾಂತ್ ಹೆಗಡೆ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post