ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಾನು 6 ತಿಂಗಳ ಗರ್ಭಿಣಿ ಎಂದು ಸಂತಸದಿಂದಿದ್ದ ಮಹಿಳೆಯೋರ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದರೆ ಬೃಹದಾಕಾರದ ಗೆಡ್ಡೆ ಇರುವುದು ಕಂಡುಬಂದಿದೆ.
ಈ ಅಪರೂಪದ ಘಟನೆ ನಡೆದಿದ್ದು ನಗರದ ಪಾರ್ಕ್ ಬಡಾವಣೆಯ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿರುವ ಸೇಫ್ ಐವಿಎಫ್ ಸೆಂಟರ್‌ನಲ್ಲಿ.
ಕಡೂರು ತಾಲೂಕಿನ ಗ್ರಾಮವೊಂದರ ಮಹಿಳೆ ಕಳೆದ 6 ತಿಂಗಳಿನಿಂದ ತನ್ನ ಹೊಟ್ಟೆ ಬೆಳೆದಿರುವುದರಿಂದ ತಾನು ಗರ್ಭಿಣಿಯಾಗಿದ್ದೇನೆಂದು ಮೊದಲು ಕಡೂರಿನ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಗೃಹಿಣಿ ಆಘಾತಕ್ಕೊಳಗಾಗಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸೇಫ್ ಐವಿಎಫ್ ಸೆಂಟರ್‌ಗೆ ಬಂದು ಮತ್ತೊಮ್ಮೆ ಸ್ಕ್ಯಾನ್ ಮಾಡಿಸಿದ ನಂತರ ಆಸ್ಪತ್ರೆ ವೈದ್ಯ ಡಾ. ಮಧು ಮತ್ತು ಡಾ. ಚಂಪ ಅವರ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ 6 ಕೆಜಿಯ ಗೆಡ್ಡೆಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ ಎನ್ನಲಾಗಿದೆ.
ಡಾ. ಮಧು ಮತ್ತು ಡಾ. ಚಂಪ ಅವರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲು ಸಹಕರಿಸಿದ ವೈದ್ಯರ ತಂಡಕ್ಕೆ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post