ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶರನ್ನವರಾತ್ರಿ ಅಂಗವಾಗಿ ನಗರದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಇಂದಿನಿಂದ ಅ.15ರವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಹಾಲಯ ಅಮಾವಾಸ್ಯೆಯಾದ ಇಂದು ಚಂದ್ರಮೌಳೇಶ್ವರನಿಗೆ ರುದ್ರಾಭಿಷೇಕ, ಶ್ರೀಶಾರದಾಂಬೆಗೆ ಮಹಾಭೀಷೇಕ ನೆರವೇರಿಸಲಾಗಿದೆ.
ನಾಳೆಯಿಂದ ಅ.15ರವರೆಗೂ ಶ್ರೀಮಠದಲ್ಲಿ ಪ್ರತಿದಿನ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರ ನೆರವೇರಲಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಕಲ್ಪೋಕ್ತ ಪೂಜೆ, 8.30ರಿಂದ ಹೋಮ, ಅಷ್ಟಾವಧಾನ ಸೇವೆ ಮಹಾಮಂಗಳಾರತಿ ನಡೆಯಲಿದೆ.
ಕೋವಿಡ್-19 ಪ್ರಯುಕ್ತ ಶ್ರೀಮಠದಲ್ಲಿ ತೀರ್ಥಪ್ರಸಾದ ಮತ್ತು ಮಹಾಪ್ರಸಾದ(ಭೋಜನ) ಇರುವುದಿಲ್ಲ ಎಂದು ಶ್ರೀಮಠ ತಿಳಿಸಿದ್ದು, ಭಕ್ತಾದಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post