No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ. ಮೈತ್ರೇಯಿ ಆದಿತ್ಯಪ್ರಸಾದ್

SPB | ಮತ್ತೆ ಹಾಡಿ ಹೃನ್ಮನಕೆ ಮುದ ತಂದ ಕೋಗಿಲೆ

kalpa News by kalpa News
July 21, 2026
in ಡಾ. ಮೈತ್ರೇಯಿ ಆದಿತ್ಯಪ್ರಸಾದ್
0
SPB The Nightingale Who Sang Again and Touched Hearts
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ನಮ್ಮ ಮನೆಯವರು ಎಸ್ಪಿಬಿ (SPB) ಅವರು ಕಾಲವಾದಾಗ ಹೇಳುತ್ತಿದ್ದ ಮಾತು ಈ ಭೂಮಿಯ ಮೇಲೆ ಒಂದಲ್ಲ ಒಂದೆಡೆ ಅವರ ಹಾಡುಗಳನ್ನು ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಏಕೆಂದರೆ ಅಷ್ಟು ಹಾಡುಗಳನ್ನು ಕೊಟ್ಟ ಗಾಯಕ ಅವರು ಎ೦ದು. ಅಂತಹ ಹಾಡುಗಳಲ್ಲಿ ಸುಂದರವಾದ ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತಾದರೂ ಹೊಸ ರೀತಿಯಲ್ಲಿ ಅದನ್ನು ಎದುರಿಸಿ ಗೆದ್ದವರು ಅದರ ಪರಿಕಲ್ಪನೆ ರೂವಾರಿಗಳಾದ ಶ್ರೀ ವಿನಯಣ್ಣ.

ಆಷಾಢದ (Ashadha) ಈ ಹೊತ್ತು ಮಳೆ ಧೋ ಎಂದು ಸುರಿಯಬೇಕಾಗಿತ್ತು. ಆದರೆ ಅದಾಗಲಿಲ್ಲ ಸಂಗೀತದ ಮಳೆಯಂತೂ ಜೋರಾಗಿಯೇ ಸುರಿದು ರಸಗಂಗೆ ಹರಿದು ಬಂದು ಮನದಂಗಳವನ್ನು ಹಸಿರಾಗಿಸಿದಂತಾಯಿತು. ಅನೇಕ ಸಹೃದಯ ಪ್ರೇಕ್ಷಕರ ಬದುಕಿನ ಸುಂದರ ಕ್ಷಣಗಳನ್ನು ಮತ್ತೆ ನೆನಪಿಸಿದ ಗಾನ ಸಂಜೆ ಇದು.

ಬರದ ಈ ಕಾಲದಲ್ಲಿ ಮತ್ತೆ ಬಾರದ ಆ ಕಾಲದ ಹಾಡಿನ ಅಮೃತ ಸಿಂಚನ ತಂಪೆರೆಯಿತು. ಅತಿಶಯೋಕ್ತಿ ಎನಿಸದ ಈ ಮಾತುಗಳು ಕಾರ್ಯಕ್ರಮದ ಆಯೋಜಕರಿಂದ ಮೊದಲಾಗಿ, ಪರಿಕಲ್ಪನೆ ರೂವಾರಿಗಳು, ಜೊತೆಯಾದ ಸಂಗೀತಗಾರರೆಲ್ಲರಿಗೂ ಕೃತಜ್ಞತಾ ಸಮರ್ಪಣೆ ಮಾಡದೇ ಹೋದಲ್ಲಿ ನಿಜಕ್ಕೂ ತಪ್ಪಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಹಣ ಕೊಟ್ಟು ಹೋಗಿ ಆಸ್ವಾದಿಸುವ ಇಂತಹ ಕಾರ್ಯಕ್ರಮಗಳು ನಮ್ಮೂರಿನಲ್ಲಿ ಉಚಿತವಾಗಿ ನಮಗೆ ನೀಡಿದವರಿಗೆ ಧನ್ಯವಾದ ಸಮರ್ಪಿಸಲೇಬೇಕೆಂದು ಬರೆದ ಲೇಖನವಿದು.

ಸರಿಯಾಗಿ 5:40ಕ್ಕೆ ಕಾರ್ಯಕ್ರಮ ಆರಂಭವಾಗುವ ವೇಳೆಗೆ ರಂಗಮಂದಿರ ಭರ್ತಿಯಾಗುವ ಹಂತಕ್ಕೆ ತಲುಪುತ್ತಾ ಬಂದಿತ್ತು. ಇನ್ನು 6:45 ಆಗುವ ವೇಳೆಗೆ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಬೇಕಾಯಿತು ರಂಗಮಂದಿರ ತುಂಬಿ ರಂಗೇರಿತ್ತು. ಗಾನಗಂಧರ್ವನ ನೆನಪಿನಲ್ಲಿ ಮೂಡಿದ ಮತ್ತೆ ಹಾಡಿತು ಕೋಗಿಲೆ ರಸದೌತಣವೇ ಆಯಿತು.ಒಂದು ಕಾರ್ಯಕ್ರಮ ಎಂದರೆ ಅದು ಹೀಗೆ ಅಚ್ಚುಕಟ್ಟಾಗಿ ಆಗಬೇಕೆಂದು ವಿನಯಣ್ಣನ ಕಲ್ಪನೆ ಅದಕ್ಕೆ ಸರಿಯಾಗಿ ಸಾತ್ ನೀಡುವವರು ಪಂಚತಾರಾ ಐಸ್ ಕ್ರೀಮ್ ನ ಶ್ರೀ ಪ್ರಕಾಶ್ ಪ್ರಭು ದಂಪತಿಗಳು. ರಸಭಂಗವಾಗುವ ಹಾಗೆ ಸಭಾ ಕಾರ್ಯಕ್ರಮಗಳಿಲ್ಲ, ಉದ್ಘಾಟನೆ ಸನ್ಮಾನ ಇತ್ಯಾದಿಗಳಿದ್ದರೂ ಅದು ಸಭಾ ಮರ್ಯಾದೆ ಎಂಬಂತೆ ಚಿಕ್ಕದಾಗಿ ಚೊಕ್ಕವಾಗಿ ಆಗುತ್ತದೆ. ಮುಖ್ಯ ಅತಿಥಿಗಳಾಗಿ ಆಗಮಿಸಿದವರಂತೂ ಶ್ರೀಯುತ ಅರುಣ್ ರವರೇ ಆಗಲಿ ಶ್ರೀಯುತ ಕಾಂತೇಶ್ ರವರೇ ಆಗಲಿ ಮಾತಾಡಿದ್ದು ಹೇಗಿತ್ತೆಂದರೆ ಇಲ್ಲಿ ಕಡಿಮೆ ಮಾತನಾಡಿದವರಿಗೇ ಬಹುಮಾನದ ಸ್ಪರ್ಧೆಗಿಳಿದಂತಿತ್ತು. ಹಾಗಾಗಿ ತುಂಬಾ ತುಂಬಾ ಹಿತವೆನಿಸುವ ವೇದಿಕೆ ಕಾರ್ಯಕ್ರಮವಾಗಿತ್ತು.

ಮುಖ್ಯ ಕಾರ್ಯಕ್ರಮದ ವಿಷಯಕ್ಕೆ ಬಂದರೆ ಮಲೆನಾಡಿನ ಕೋಗಿಲೆಗಳು ಗಾನ ಗಂಧರ್ವ ಸರಸ್ವತಿ ಪುತ್ರನನ್ನು ಚಿರಸ್ಥಾಯಿಯಾಗಿಸಿದವು. ಶಾರದೇ ದಯೆ ತೋರದೇ ಎಂಬಲ್ಲಿಂದ ಆರಂಭವಾಗಿ ಸಂಗೀತವೇ ನನ್ನ ಉಸಿರು ಎಂಬಲ್ಲಿಗೆ ಬರೋಬ್ಬರಿ 30 ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಅದು ಹೇಗೆಂದರೆ ಎಸ್ಪಿಬಿ ಅವರ ವಿಶೇಷ ಮತ್ತು ವೈಶಿಷ್ಟ್ಯಗಳನ್ನು ತಿಳಿಸುವ ಹಾಡುಗಳು. ಒಂದು ಹೂವಿನ ಬೊಕ್ಕೆಯಲ್ಲಿನ ವಿವಿಧ ರೀತಿಯ ಹೂಗಳಿರುವಂತೆ ಪ್ರತಿಯೊಂದು ಸಹ ಹೊಸ ರೀತಿಯದು, ಅಷ್ಟಾಗಿ ಸಾಮಾನ್ಯವಾಗಿ ಆರ್ಕೆಸ್ಟ್ರಾಗಳಲ್ಲಿ ಹಾಡಲು ಧೈರ್ಯ ಮಾಡದ ಹಾಡುಗಳನ್ನೇ ಸವಾಲಿನಂತೆ ಹಾಡಿ ಒಂದು ಸುಂದರ ಹಾಡಿನ ಗುಚ್ಚವನ್ನ ಎಸ್‌ಪಿಬಿಗೆ ಸಮರ್ಪಿಸಿದ ಭಾವ ಮೂಡಿತು.

SPB ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತು

ನಮ್ಮ ಮನೆಯವರು ಎಸ್ಪಿಬಿ ಅವರು ಕಾಲವಾದಾಗ ಹೇಳುತ್ತಿದ್ದ ಮಾತು ಈ ಭೂಮಿಯ ಮೇಲೆ ಒಂದಲ್ಲ ಒಂದೆಡೆ ಅವರ ಹಾಡುಗಳನ್ನು ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಏಕೆಂದರೆ ಅಷ್ಟು ಹಾಡುಗಳನ್ನು ಕೊಟ್ಟ ಗಾಯಕ ಅವರು ಎ೦ದು. ಅಂತಹ ಹಾಡುಗಳಲ್ಲಿ ಸುಂದರವಾದ ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತಾದರೂ ಹೊಸ ರೀತಿಯಲ್ಲಿ ಅದನ್ನು ಎದುರಿಸಿ ಗೆದ್ದವರು ಅದರ ಪರಿಕಲ್ಪನೆ ರೂವಾರಿಗಳಾದ ಶ್ರೀ ವಿನಯಣ್ಣ. ಪ್ರತಿನಿತ್ಯ ರೇಡಿಯೋ ಆನ್ ಮಾಡಿದಾಗಲೆಲ್ಲ ಎಸ್ಪಿಬಿ ಹಾಗೂ ಎಸ್. ಜಾನಕಿ ಅವರ ಹಾಡು ಕೇಳಿ ಬೆಳೆದವರಾದ ನಮಗೆ ಈ ಸಂಜೆ ರಸದೌತಣವೇ ಆಗಿತ್ತು.ಎಸ್ಪಿಬಿ ಅವರ ವಿಶೇಷತೆಗಳಲ್ಲಿ ಒಮ್ಮೆ ಪ್ರಸಿದ್ಧವಾದ ಭಾವಗೀತೆಗೆ ಮತ್ತೆ ದನಿಯಾಗಿ ನಮ್ಮೆದೆಗೆ ಇಳಿದ ಹಾಡಾದ ನಿನ್ನ ಪ್ರೇಮದ ಪರಿಯ… ಗಾಯಕ ನೆಲ್ಲಿನ ನಟನನ್ನು ತೋರಿಸಿದ ಕಾಮಿಕ್ ಗೀತೆಯಾದ ತಾಳಿ ಕಟ್ಟುವ ಶುಭ ವೇಳೆ… ಚೆನ್ನಾಗಿ ಹಾಡುವ ಹಾಡುಗಾರನೂ ಒಬ್ಬ ಹಾಡಲು ಬಾರದ ಹಾಡುಗಾರನಂತೆ ಹಾಡಿದ ತೆಲುಗಿನ ಸ್ವಾತಿಮುತ್ಯಂ ನ ಸುವ್ವಿ ಸುವ್ವಿ… ಶ್ರೀನಾಥ್’ಗಾಗಿ ಹಾಡಿದ ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ…. ಮನುಷ್ಯರ ಧ್ವನಿಗಳಲ್ಲಿ ಸಂಗೀತದ ನೋಟ್ ಬರೆಯುವ ಅಕಪೆಲ್ಲ ಶೈಲಿಯ ಕೇಳದೆ ನಿಮಗೀಗ…. ತಮಿಳಿನ ಬ್ರೆಥ್ಲೆಸ್ ಹಾಡಾದಂತಹ ಮಣ್ಣಿನಿಂದ್ರ ಕಾದಲ್… ಎಸ್ಪಿಬಿ ತನ್ನ ಹೆಂಡತಿಗಾಗಿಯೇ ಹಾಡಿದ ಹಾಗೂ ತೆರೆಯ ಮೇಲೆ ವಿಷ್ಣು ದಂಪತಿಗಳಿರುವ ಚೆಲುವೆಯ ಅಂದದ ಮೊಗಕೆ…. ಎ.ಆರ್. ರೆಹಮಾನ್ ಅಂತಹ ಆಗ ತಾನೇ ಉದಯಿಸಿದ ಸಂಗೀತಗಾರನ ಹಾಡಿಗೂ ದನಿಯಾದ ರೋಜಾ ಜಾನೆಮನ್…. ಇವತ್ತಿನ ಜೆನ್ ಜೀಯು ಕೇಳಿ ಖುಷಿ ಪಡುವ ನಲಿವ ಗುಲಾಬಿ ಹೂವೇ… ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂದು ತೋರಿಸಿದ ಶಂಕರಾಭರಣಂ ಹಾಡು, ವರ್ಸಟೈಲ್ ಸಿಂಗರ್ ಎಂದು ತೋರಿಸಿದ ತರೀಕೆರೆ ಏರಿ ಮೇಲೆ…. ವಾಣಿ ಜಯರಾಮ್ ಜೊತೆ ಹಾಡಿದ ನನ್ನದೇ ವೀಣೆಯು ಮಿಡಿಯುತಿದೆ… ಹಂಸಲೇಖ ರವಿಚಂದ್ರನ್ ಕಾಂಬಿನೇಷನ್ ಗೀತೆಯಾದ ಸಂಗೀತವೇ ನನ್ನ ಉಸಿರು… ಹೀಗೆ ಒಂದಕ್ಕಿಂತ ಒಂದು ವಿಶೇಷವಾದ ಹಾಡುಗಳಾಗಿದ್ದವು. ಈ ಎಲ್ಲಾ ಹಾಡುಗಳು ಎಸ್ಪಿಬಿ ಅನ್ನು ಸಮಗ್ರವಾಗಿ ಕಟ್ಟಿಕೊಟ್ಟವು.ವಿನಯಣ್ಣ ಪ್ರತಿ ಬಾರಿ ಇಂತಹ ಕಾರ್ಯಕ್ರಮ ಮಾಡಿದಾಗಲೂ ಕಳಚಿದ ಶಿವಮೊಗ್ಗದ ಕೊಂಡಿಯನ್ನು ಮತ್ತೆ ತರುವ ಪ್ರಯತ್ನ ಮಾಡುತ್ತಾರೆ. ಅದರಂತೆ ಅಮಿತ್ ಅವರನ್ನು ಪರಿಚಯಿಸಿದರೆ, ಶ್ರೀಮತಿ ಕೆ ಸುರೇಖಾ ಅವರು ಎಸ್ ಜಾನಕಿಗೆ ನೀಡಿದ ಟ್ರಿಬ್ಯುಟ್ ಹಾಗೂ ಸುರೇಖಾ ಹೆಗಡೆಯವರು ಹಾಡಿದ ಈ ಭಾವಗೀತೆ, ತೇರೆ ಮೇರೆ ಬೀಚ್ ಮೇ… ನಿಜಕ್ಕೂ ಅವರಿಬ್ಬರಿಗೆ ನೀಡಿದ ಕ್ರಮವಾಗಿ “ಗಾನ ಸುರಭಿ” ಮತ್ತು “ಗಾನ ಮಾಧುರಿ” ಎಂಬ ಬಿರುದು ಸಾರ್ಥಕವಾದಂತಾಯಿತು.

Also read: Shivamogga | ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ | ವಿಜಯೇಂದ್ರ ಖಂಡನೆ

ಪಾರ್ಥ, ಪೃಥ್ವಿ, ವಿಶಾಖ್, ಕಾರ್ತಿಕ್ ಸಂಜನಾ ಇವರುಗಳ ಪ್ರಯತ್ನಕ್ಕೆ ಶಿವಮೊಗ್ಗದ ಜನತೆ ಬೆರಗಾಗಿ ಹೋದರು. ತಮ್ಮ ಕಳೆದ ದಿನಗಳ ಹಳೆಯ ನೆನಪುಗಳನ್ನ ಮನದಂಗಳಕ್ಕೆ ತಂದುಕೊಂಡು ತಂಗಾಳಿಯ ಭಾವ ಅನುಭವಿಸಿ ಪ್ರೇಕ್ಷಕರು ತೆರಳಿದ್ದಂತೂ ಸತ್ಯ. ಜೊತೆಯಲ್ಲಿ ಸಹಕರಿಸಿದ ವಾದ್ಯವರಿಂದ ಹಾಗೂ ಸೌಂಡ್ ಸಿಸ್ಟಮ್ ತಾಳಮೇಳ ಹೊಂದಿದ ಜೋಡಿಯಂತಿತ್ತು.

ಇದೆಲ್ಲಕ್ಕೂ ಕಾರಣರಾದ ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟೇಬಲ್ ಟ್ರಸ್ಟ್ ನ ಶ್ರೀ ಪ್ರಕಾಶ್ ಪ್ರಭು ಹಾಗೂ ಶ್ರೀಮತಿ ರೀತಾ ಪ್ರಭು ದಂಪತಿಗಳು, ಅವರು ತಮ್ಮ ಪಂಚತಾರಾ ಹೋಟೆಲ್ ನಲ್ಲಿ ಕೊಡುವ ತಂಪಾದ ಐಸ್ ಕ್ರೀಮ್ ಸವಿದ ಅನುಭವವನ್ನು ನಮಗೆ ತರಿಸಿದರು. ಕಾರ್ಯಕ್ರಮ ಕೊನೆಯವರೆಗೂ ನೋಡಿ ಸವಿದ ಶಿವಮೊಗ್ಗ ನಗರದ ಜನತೆಯ ಪರವಾಗಿ ಅನಂತಾನಂತ ಧನ್ಯವಾದಗಳು. ಈ ಬಗೆಯ ಸದಭಿರುಚಿಯ ಕಾರ್ಯಕ್ರಮಗಳು ಮತ್ತಷ್ಟು ಬರುವಂತಾಗಲಿ… ಎಂಬ ಆಶಯದೊಂದಿಗೆ ಯಾರೆಲ್ಲ ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿದ್ದಿರೋ ಅವರು ಸಾರಥಿ ಯೂಟ್ಯೂಬ್ ಚಾನಲ್’ನಲ್ಲಿ ವೀಕ್ಷಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalpa News Advertising DisclaimerKalahamsa Infotech private limited

Tags: Kannada News WebsiteLatest News KannadaMatte Haditu KogileMusic ConcertMusic ProgramS P BalasubrahmanyamShimogaShivamoggaShivamogga NewsSPBVinay Shivamoggaಆಷಾಢಎಸ್’ಪಿಬಿಮತ್ತೆ ಹಾಡಿತು ಕೋಗಿಲೆ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಅವೈಜ್ಞಾನಿಕ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುತ್ತಿರುವುದು ಖಂಡನೀಯ: ರೈತ ಸಂಘ ಪ್ರತಿಭಟನೆ

Next Post

S Janaki ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ | ಸಂಗೀತ ಕಲಾವಿದರಿಂದ ನುಡಿ ನಮನ

kalpa News

kalpa News

Next Post
ಎಸ್. ಜಾನಕಿ ನಿಧನ : ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಸಂತಾಪ

S Janaki ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ | ಸಂಗೀತ ಕಲಾವಿದರಿಂದ ನುಡಿ ನಮನ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL