ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿರಂತನ ಯೋಗ ಮತ್ತು ಸಂಗೀತ ಕೇಂದ್ರದ ವತಿಯಿಂದ ಇತ್ತೀಚಿಗೆ ಖ್ಯಾತ ಗಾಯಕಿ, ಗಾನಕೋಗಿಲೆ ದಿ.ಎಸ್.ಜಾನಕಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹೋಟೆಲ್ ಮಥುರ ಪ್ಯಾರಡೈಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಹಲವಾರು ಕಡೆಯಿಂದ ಆಗಮಿಸಿದ ಸುಮಾರು 150 ಜನ ಸಂಗೀತ ಕಲಾವಿದರು ಮತ್ತು ಅಭಿಮಾನಿಗಳು ಪಾಲ್ಗೊಂಡು ಎಸ್.ಜಾನಕಿ ಹಾಡಿದ 88 ಪಲ್ಲವಿಗಳನ್ನು ಹಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಗಾಯಕಿ ಹಾಗೂ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷೆ ಶಾಂತಾ ಶೆಟ್ಟಿ, ತಾವು ಕಂಡ ಮಹಾನ್ ಕಲಾವಿದರಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರರಾದವರು ಎಸ್.ಜಾನಕಿ ಆಗಿದ್ದರು. ಅವರ ಜೊತೆಗೆ ನನ್ನ ಸ್ನೇಹವಿತ್ತು ಎನ್ನುವುದೇ ನನಗೊಂಡು ದೊಡ್ಡ ಹೆಮ್ಮೆ ಕಿರಿಯ ಕಲಾವಿದರನ್ನು ಗೌರವಿಸುವ, ಪ್ರೋತ್ಸಾಹಿಸುವ ಔದಾರ್ಯ ಅವರಲ್ಲಿ ಇತ್ತು. ಅವರು ಇಲ್ಲ ನಿಜ ಆದರೆ ಅವರ ಹಾಡುಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಇರುತ್ತವೆ ಎಂದರು.
Also read: SPB | ಮತ್ತೆ ಹಾಡಿ ಹೃನ್ಮನಕೆ ಮುದ ತಂದ ಕೋಗಿಲೆ
ಲೇಖಕ ಎಂ.ಎನ್. ಸುಂದರ ರಾಜ್ ಮಾತನಾಡಿ, ಜಾನಕಿ ಅಮ್ಮನವರು ಅದೆಷ್ಟೇ ಎತ್ತರಕ್ಕೆ ಬೆಳೆದರೂ ಸಹ ಸರಳತೆಯೇ ಸಾಕಾರ ಮೂರ್ತಿಯಾಗಿದ್ದರು ಎಂದು ವರ್ಣಿಸಿದರು.
ಖ್ಯಾತ ಗಾಯಕಿ ಸುರೇಖಾ.ಕೆ.ಎಸ್ ಮಾತನಾಡಿ, ಸಂಗೀತ ಲೋಕದ ನಕ್ಷತ್ರ ಎಸ್.ಜಾನಕಿ ಅವರು. ನಲವತ್ತೆಂಟು ಸಾವಿರ ಹಾಡುಗಳನ್ನು ಹಾಡಿದ್ದಾರೆ ಎಂದರೆ ಅದೊಂದು ದಾಖಲೆಯೇ ಸರಿ ಅಷ್ಟೊಂದು ಖ್ಯಾತ ಗಾಯಕಿ ಆಗಿದ್ದರು ಕೂಡ ಅತ್ಯಂತ ಸರಳ ಮೂರ್ತಿ ಆಗಿದ್ದರು ಎಂದರಲ್ಲದೆ ಎಸ್.ಜಾನಕಿ ಹಾಡಿದ ಎರಡು ಗೀತೆಗಳನ್ನು ಹಾಡಿ, ಪ್ರೇಕ್ಷರ ಮನಸೂರೆಗೊಂಡರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ.ವಿಜಯ್‍ಕುಮಾರ್, ಕಲಾವಿದ ಸುರೇಶ್ ಕುಮಾರ್, ವಿಜಯಕ್ಷ್ಮಿ ಪಂಡಿತ್, ಸುಶೀಲ ಷಣ್ಮುಗಂ, ಶೋಭಾ ಸತೀಶ್, ನಳೀನಾಕ್ಷಿ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









