ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ನೆರೆಯಿಂದಾಗಿ ಭಾರೀ ಹಾನಿಯುಂಟಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಅನುಗ್ರಹಿಸುವಂತೆ ಶ್ರೀರಾಮದೇವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೊರೆ ಹೋಗಿದ್ದಾರೆ.
ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ಕಾಗೇರಿಯವರು, ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಸ್ವರ್ಣಮಂಟಪದಲ್ಲಿ ವಿರಾಜಮಾನವಾದ ಅಗಸ್ತ್ಯೆಮುನಿ ಸಂಪೂಜಿತ ಶ್ರೀರಾಮಾದಿ ವಿಗ್ರಹಗಳು, ಅನ್ವರ್ಥ ಚಂದ್ರಮೌಳೀಶ್ವರ, ಶ್ರೀರಾಜರಾಜೇಶ್ವರ್ಯಾದಿ ಶ್ರೀಕರಾರ್ಚಿತ ದೇವತಾ ದಿವ್ಯ ಸಾನ್ನಿಧ್ಯದ ದರ್ಶನಾಶೀರ್ವಾದ ಪಡೆದು, ಭೀಕರವಾದ ಮಳೆಯಿಂದ ಉಂಟಾಗಿರುವ ನೆರೆ ಸಮಸ್ಯೆ ಬಗ್ಗೆ ಪ್ರಾರ್ಥಿಸಿ, ನಾಡಿನ ಜನತೆಗೆ ಕ್ಷೇಮವನ್ನು ಪ್ರಾರ್ಥಿಸಿದರು.
ಆನಂತರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ವಿಶೇಷವಾಗಿ ನಾಡಿನಲ್ಲಿ ಉಂಟಾಗಿರುವ ನೆರೆ ಸಮಸ್ಯೆಯ ಕುರಿತಾಗಿ ಅವರು ಪ್ರಾರ್ಥಿಸಿದ್ದಾರೆ.
Discussion about this post