ಕಲ್ಪ ಮೀಡಿಯಾ ಹೌಸ್ | ಟೆಲ್ ಅವಿವಾ |
ಇಸ್ರೇಲ್ Israel ಹಾಗೂ ಹಮಾಸ್ ಉಗ್ರರ Hamas Terrorist ನಡುವೆ ನಡೆಯುತ್ತಿರುವ ಯುದ್ಧ ಅತ್ಯಂತ ಭೀಕರ ಹಂತಕ್ಕೆ ತಲುಪಿದ್ದು, ಇದರ ಘೋರ ವೀಡಿಯೋಗಳು ವೈರಲ್ ಆಗುತ್ತಿವೆ.
ಗಾಜಾ ಉಗ್ರರು Gaza Terrorist ಇಸ್ರೇಲಿ ಯೋಧೆಯೊಬ್ಬಳನ್ನು ಕೊಂದು ಆಕೆಯ ಶವವನ್ನು ನಗ್ನಗೊಳಿಸಿ ತೆರೆದ ವಾಹನದಲ್ಲಿ ಪ್ಯಾಲಿಸ್ತೇನ್’ನಲ್ಲಿ ಮೆರವಣಿಗೆ ಮಾಡುವ ಮೂಲಕ ಪೈಶಾಚಿಕತೆ ಮೆರೆದಿದ್ದಾರೆ.
ಇಂದು ಮುಂಜಾನೆ ಏಳು ಗಂಟೆಗೆ ಗಾಜಾ ಪಟ್ಟಿಯಿಂದ ಸತತಗವಾಗಿ ದಕ್ಷಿಣ ಇಸ್ರೇಲ್ ಮತ್ತು ಮಧ್ಯ ಇಸ್ರೇಲ್ ಕಡೆಗೆ ರಾಕೆಟ್ ದಾಳಿ ಪ್ರಾರಂಭಿಸಲಾಗಿತ್ತು.
ಇಂತಹ ಪರಿಸ್ಥಿತಿ ವೇಳೆಯಲ್ಲಿಯೇ ಐವರು ಇಸ್ರೇಲಿ ಯೋಧರು ಹಮಾಸ್ ಉಗ್ರರಿಗೆ ಸೆರೆ ಸಿಕ್ಕಿದ್ದು, ಅವರನ್ನು ಗಾಜಾ ಪಟ್ಟಣದೆಡೆಗೆ ಅಪಹರಿಸಿ ಕರೆದೊಯ್ಯಲಾಗಿದೆ.
ಇದೇ ವೇಳೆಯಲ್ಲಿ ಯೋಧೆಯನ್ನು ಅಪಹರಣ ಮಾಡಿದ ಹಮಾಸ್ ಉಗ್ರರು ಆಕೆಯ ಮೇಲೆ ದೌರ್ಜನ್ಯ ನಡೆಸಿ, ಹತ್ಯೆ ಮಾಡಿದ ನಂತರ ಆಕೆಯ ಶವವನ್ನು ನಗ್ನಗೊಳಿಸಿದ್ದಾರೆ. ಆನಂತರ ನಗ್ನ ದೇಹವನ್ನು ನಗರದಲ್ಲಿ ಮೆರವಣಿಗೆ ಮಾಡಿ ಘೋಷಣೆಗಳನ್ನು ಕೂಗುವ ಮೂಲಕ ರಾಕ್ಷಸೀ ಕೃತ್ಯ ಎಸಗಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಯುದ್ಧ ಘೋಷಿಸಲಿದ್ದಾರೆಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post