ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶ್ರೀ ಶಬರಿ ಗಿರೀಶ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 7ನೆಯ ವಾರ್ಷಿಕೋತ್ಸವದ ಅಂಗವಾಗಿ ಬನಶಂಕರಿ 3ನೆಯ ಹಂತದ ಇಟ್ಟಮಡುವಿನಲ್ಲಿ ಶ್ರೀಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಅತ್ಯಂತ ಅದ್ದೂರಿ ಹಾಗೂ ವೈಭವಯುತವಾಗಿ ಧರ್ಮಶಾಸ್ತನ ಪೂಜೆಗಾಗಿ ಕತ್ತರಿಗುಪ್ಪೆಯ ದಿನೇಶ್ ಅವರು ಸುಂದರವಾಗಿ ಬಾಳೆ ದಿಂಡಿನ ಮಂಟಪ ನಿರ್ಮಿಸಿದ್ದರು. ಮಂಟಪದ ಬಲ ಹಾಗೂ ಎಡ ಬದಿಯಲ್ಲಿ ಸಂಕಷ್ಟ ನಿವಾರಕ ಗಣೇಶ ಹಾಗೂ ಶ್ರೀ ಸುಬ್ರಹಮಣ್ಯ ಸ್ವಾಮಿ ಹಾಗೂ ಮಧ್ಯ ಭಾಗದಲ್ಲಿ ಶ್ರೀಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಇರುಮುಡಿ ಹೊತ್ತಾಗ ಹದಿನೆಂಟು ಮೆಟ್ಟಿಲು ಏರಿಯೇ ಸಾಗಬೇಕು. ಹೀಗಾಗಿ ಇಲ್ಲೂ ಸಹ ಪ್ರತಿಷ್ಠಾಪನೆ ಮಾಡಿದ್ದ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮುಂಭಾಗದಲ್ಲಿ ಹದಿನೆಂಟು ನಂದಾದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಜೆಯ ನೇತೃತ್ವ ವಹಿಸಿದ್ದ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಗಿರೀಶ್ ಗುರುಸ್ವಾಮಿ ಅವರು, ಮನದ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.

ಜೀವನದಲ್ಲಿ ಒಂದು ಬಾರಿಯಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಇಟ್ಟುಕೊಂಡವರ ಸಂಖ್ಯೆ ಅಗಣಿತ. ವರ್ಷಕ್ಕೊಮ್ಮೆ ಹೋಗಿ ಬರುವವರ ಸಂಖ್ಯೆಯೂ ಅಔರಿಮಿತ (ಅಪರಮಿತ) 18 ವರ್ಷ ಇರುಮುಡಿ ಹೊತ್ತು ’’ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಬಂದರೆ ಮಹಾ ಪುಣ್ಯ ಎಂಬ ನಂಬಿಕೆಯವರು ಅಸಂಖಾ ಎನ್ನುತ್ತಾರೆ.
ಮಾಲೆ ಧರಿಸಿ, ವ್ರತಾಚರಣೆ ಕೈಗೊಂಡು ಇರುಮುಡಿ ಹೊತ್ತುಕೊಂಡೇ ಹೋಗಿ ಬಂದಿದ್ದೇವೆ. ಇನ್ನೂ ವಿಶೇಷವೆಂದರೆ ಒಂದೇ ಒಂದು ಬಾರಿಯೂ ಒಬ್ಬರೇ ಹೋಗಿಲ್ಲ. ಪ್ರತೀ ಬಾರಿ ಶಿಷ್ಯ ವೃಂದಕ್ಕೆ ಮಾಲೆ ಹಾಕಿ ಕರೆದುಕೊಂಡೇ ಹೋಗುತ್ತೇವೆ. ಸರಾಸರಿ ಪ್ರತೀ ಬಾರಿ ಯಾತ್ರೆ ಕೈಗೊಂಡಾಗ 30 ಸ್ವಾಮಿಗಳು ನನ್ನ ಜೊತೆ ಇರುತ್ತಾರೆ ಎನ್ನುತ್ತಾರೆ.
ಬನಶಂಕರಿಯ 3ನೆಯ ಹಂತದ ಇಟ್ಟಮಡುವಿನಲ್ಲಿ ಮುಂಬರುವ ದಿನಗಳಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪ ಸ್ವಾಮಿಯ ದೇವಾಲಯ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಭಕ್ತರ ಸಹಾಯಹಸ್ತದಿಂದ ಹಾಗೂ ನಮ್ಮ ಜೊತೆ ಮಾಲೆ ಧರಿಸಿ ಬರುವ ಸ್ವಾಮಿಗಳು ಜೊತೆ ಸೇರಿಸಿ ದೇವಾಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎನ್ನುತ್ತಾರೆ ಗಿರೀಶ್ ಗುರುಸ್ವಾಮಿ.
ನವೆಂಬರ್ 16ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ ಆರಂಭವಾದಾಗ ಮಾಲೆ ಧರಿಸಿ ಜನವರಿ 21 ರಂದು ಶಬರಿಮಲೆಯಲ್ಲಿ ಮಕರವಿಳಕ್ಕು’ (ವಿಕಲಮ್)ರಂದು ಮಾಲೆ ತೆಗೆಯುವುದಾಗಿ ಹೇಳುತ್ತಾರೆ.

ಶಬರಿಮಲೆಯಲ್ಲಿ ಮಕರವಿಳಕ್ಕು’(ವಿಕಲಮ್) ನಂತರ ತಿಂಗಳಲ್ಲಿ 5 ದಿನಗಳ ಬಾಗಿಲು ತೆರೆದಿರುತ್ತದೆ. ಆದರೆ ಶಬರಿಗಿರಿಯಲ್ಲಿ ಮಕರವಿಳಕ್ಕು’ ಸಮಯದಲ್ಲಿ ದರ್ಶನ ಮಾಡಲು ಹೋಗಲು ಸಾಧ್ಯವಾಗದೆ ಇದ್ದ ಕಾರಣವನ್ನು ಮೊದಲೇ ದೇವಾಲಯದ ಆಡಳಿತ ಮಂಡಳಿಯಲ್ಲಿ ತಿಳಿಸಿದರೆ ಅಲ್ಲಿ ದರ್ಶನ ಲಭ್ಯವಾಗುತ್ತದೆ ಎನ್ನುತ್ತಾರೆ ಗಿರೀಶ್ ಗುರುಸ್ವಾಮಿ!!
ಪುಣ್ಯಕ್ಷೇತ್ರ ಶಬರಿಮಲೆ
ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಕೇರಳದಲ್ಲಿರುವ ಹಿಂದೂಗಳ ಪ್ರಸಿದ್ಧ ಪುಣ್ಯ ಯಾತ್ರಾ ಸ್ಥಳ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ.
ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಶಾಸ್ತ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರೂ ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳನ್ನು ಪ್ರತಿ ವರ್ಷ ಸೆಳೆಯುತ್ತದೆ.
ಹದಿನೆಂಟು ಮೆಟ್ಟಿಲು, ಮಾಲೆಯನ್ನು ಧರಿಸುವುದು, ವ್ರತಾಚರಣೆ, ಇರುಮುಡಿ ಹೀಗೆ ಎಲ್ಲದಕ್ಕೂ ಪ್ರಾಚೀನ ಪರಂಪರೆಯ ತಾತ್ವಿಕತೆಗೂ ಸದ್ಯದ ಶ್ರದ್ಧೆಗೂ ನಂಟಿರುವುದು ಸ್ಪಷ್ಟವಾಗುತ್ತದೆ.
ನವೆಂಬರ್-ಡಿಸೆಂಬರ್ ಮಂಡಲ ಪೂಜಾ ಅವಧಿಯಲ್ಲಿ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಜನವರಿ 14 ಮಕರ ಸಂಕ್ರಾಂತಿ, ಏಪ್ರಿಲ್ 14 ಮಹಾ ವಿಶು ಸಂಕ್ರಾಂತಿ ಮತ್ತು ಪ್ರತಿ ಮಲಯಾಳಂ ಮಾಸದ ಮೊದಲ ಐದು ದಿನ ಅಯ್ಯಪ್ಪನ ದರ್ಶನ ಮುಕ್ತವಾಗಿರುತ್ತದೆ.
ಈ ಸಂದರ್ಭದಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ, ಜನವರಿಯಲ್ಲಿ ಸಂಪನ್ನವಾಗುತ್ತದೆ.
Get in Touch With Us info@kalpa.news Whatsapp: 9481252093









Discussion about this post