ಕೆಲವರಿಗೆ ರಾಷ್ಟ್ರಪಿತ ಗಾಂಧೀಜಿ, ಕೆಲವರಿಗೆ ರಾಷ್ಟ್ರ ಪಿತಾಮಹ… ಯಾರೋ ಆಗಿರಬಹುದು. ಆದರೆ ನಿಜವಾದ ಈ ಮನ್ವಂತರದ ರಾಷ್ಟ್ರಪಿತ ವೈವಸ್ವತ ಮನು. ವಿಷಾಧನೀಯ ಎಂದರೆ ಆ ಮನುವನ್ನೇ ಹಳಿಯುವುದು ನಿಂದಿಸುವುದನ್ನು ನಾವು ಕಾಣುತ್ತೇವೆ. ಯಾಕೆ ಈ ಮನುವನ್ನು ನಾವು ಸ್ಮರಿಸಬೇಕು ಎಂದರೆ ಮೊದಲಾಗಿ ಮನುವಿನ ಬಗ್ಗೆ ಅರಿವು ಇರಬೇಕು.
ಈ ಮನು ಯಾರು?
ಹದಿನಾಲ್ಕು ಮನುಗಳಲ್ಲಿ ವೈವಸ್ವತ ಮನುವೂ ಒಬ್ಬ. ಇವನು ಏಳನೆಯ ಮನುವಾಗುತ್ತಾನೆ. ಇವನ ಪೂರ್ವ ಹೆಸರು ಶ್ರಾದ್ಧಾ ದೇವ. ವಿವಸ್ವಂತನೆಂಬ ಆದಿತ್ಯನಿಂದ, ತೃಷ್ಟೃವಿನ ಮಗಳಾದ ಸಂಜ್ಞಾ ದೇವಿಯಲ್ಲಿ ವಿಶ್ವಜಿತ್ ಎಂಬ ಹೆಸರಿನಲ್ಲಿ ಜನಿಸಿದವನೀತ. ಬ್ರಹ್ಮದೇವನ 50 ನೆಯ ವರ್ಷದಲ್ಲಿ(ದೇವ ಮಾನ ವರ್ಷ) ಇವನು ರವಿಯ ಶಕ್ತಿಯಿಂದ ಜನಿಸಿದವ. ಸಕಲ ಜೀವಜಂತುಗಳಿಗೂ ಕರುಣೆ ತೋರುವವನೀತ.
ಒಂದು ದಿನ ಈತ ನದೀ ಸ್ನಾನ ಮಾಡುವಾಗ ಇವನ ಕೈಯಲ್ಲಿದ್ದ ಕಮಂಡಲದಲ್ಲಿ ಒಂದು ಮತ್ಸ್ಯದ ಮರಿಯು ನುಗ್ಗುತ್ತದೆ. ಅದನ್ನು ಮತ್ತೆ ನೀರಿಗೆ ಹಾಕೋಣ ಎಂದು ಕಂಡಲದ ನೀರನ್ನು ಚೆಲ್ಲಲು ಹೊರಟಾಗ, ಆ ಮೀನು ಮಾತನಾಡಲು ಶುರು ಮಾಡುತ್ತದೆ.’ ಹೇ ರಾಜನ್, ದೊಡ್ಡ ದೊಡ್ಡ ಮೀನುಗಳು ನನ್ನನ್ನು ನುಂಗಲು ಪ್ರಯತ್ನಿಸುವಾಗ ನಿನ್ನ ಕಮಂಡಲದೊಳಗೆ ಬಂದು ಅವಿತುಕೊಂಡೆ. ಮತ್ತೆ ನೀನು ನನ್ನನ್ನು ನೀರಿಗೆ ಬಿಟ್ಟರೆ ನನ್ನ ಸಾವು ಖಚಿತ. ದಯವಿಟ್ಟು ಜೀವ ದಾನ ಮಾಡು’ ಎಂದು ವಿನಂತಿಸಿತು.
ಕನಿಕರಗೊಂಡ ವಿಶ್ವಜಿತ್ ಚಕ್ರವರ್ತಿಯು ಅದನ್ನು ಅರಮನೆಗೆ ತಂದು ಸರೋವರದಲ್ಲಿ ಬಿಟ್ಟ. ಆದರೆ ಮರುದಿನ ಬಂದು ನೋಡಿದರೆ ಅದು ಬೃಹದ್ಗಾತ್ರದಲ್ಲಿ ಸರೋವರವನ್ನೇ ತುಂಬಿತ್ತು. ಆಗ ಮತ್ತೆ ಆ ಮತ್ಸ್ಯವು ರಾಜನಿಗೆ, ಹೇ ಚಕ್ರವರ್ತಿ, ಈಗ ನನ್ನನು ನದಿಗೆ ಸಾಗಿಸಿಬಿಡು. ನಾನು ಬಲಿಷ್ಟನಾದೆ’ ಎನ್ನುತ್ತದೆ. ಚಕ್ರವರ್ತಿಯು ಹಾಗೇ ಮಾಡಿದ.
ಆಗ ಮತ್ತೊಮ್ಮೆ ಆ ಮತ್ಸ್ಯರೂಪಿ ಪರಮಾತ್ಮನು,’ ಹೇ ದಯಾಳುವೇ, ನಾನು ನಿನ್ನನ್ನು ಪರೀಕ್ಷಿಸಲೆಂದೇ ಈ ರೀತಿ ಮಾಡಿದೆ. ನನಗೊಬ್ಬ ಪರಮ ದಯಾಳು ಮನುಷ್ಯನ ಅವಶ್ಯಕತೆ ಇತ್ತು. ನಾನು ಸಣ್ಣ ಕ್ರಿಮಿ ರೂಪದಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡಾಗ ನೀನು ನನ್ನನ್ನು ಕೂಡಾ ಸಾಮಾನ್ಯ ಎಂದು ತಿಳಿಯದೆ ರಕ್ಷಿಸಿದೆ.(Ignore ಮಾಡದೆ) ಇಂತಹ ಭೂ ಮಂಡಲಾಧಿಪ ಇದ್ದರೆ ಜಗತ್ತಿನ ಸಕಲ ಜೀವ ರಾಶಿಗಳಿಗೂ ಕ್ಷೇಮವೇ ಎಂಬುದು ನನಗೆ ತಿಳಿಯಿತು. ಮುಂದೆ ಏಳು ದಿನಗಳಲ್ಲಿ ಭೂ ಪ್ರಳಯ ಆಗಲಿದೆ. ಆಗ ಸಕಲ ಚರಾ ಚರಗಳೂ ನಶಿಸುತ್ತದೆ. ನೀನು ಹಡಗು, ದೋಣಿಗಳನ್ನು ನಿರ್ಮಿಸಿ ಸಕಲ ಜೀವ ಜಂತುಗಳ ಜೀವ ಕೋಶಗಳ (Cloning Culture ಎನ್ನಬಹುದು) ಗಳನ್ನೂ ಸಂಗ್ರಹಿಸಿ ರಕ್ಷಿಸಬೇಕು. ಮೇರು ಪರ್ವತಗಳಲ್ಲಿ ಋಷಿ ಮುನಿಗಳು(Scientist) ಇರುತ್ತಾರೆ. ಮತ್ತೆ ಪ್ರಳಯವು ಇಳಿಮುಖವಾಗಿ ಭೂಮಿ ಗೋಚರಿಸಿದಾಗ ಆ ಋಷಿಗಳು ನಿನ್ನ ಬಳಿ ಬರುತ್ತಾರೆ. ಅವರ ಮೂಲಕ ನೀನು ಸಂಗ್ರಹಿಸಿದ ಸಕಲ ಜೀವ ಕೋಶಗಳೂ ವೃದ್ಧಿಯಾಗಿ, ಮತ್ತೆ ಜಗತ್ತಿನ ಸ್ಥಿತಿಯು ಯಥಾ ಸ್ಥಿತಿಯಾಗುತ್ತದೆ. ಇಷ್ಟು ಕೆಲಸ ನೀನು ಮಾಡಿದಾಗ ನಿನಗೆ ವೈವಸ್ವತ ಮನು ಎಂಬ ಹೆಸರಾಗಿ, ಮನ್ವಂತರಾಧಿಪನೂ ನೀನೇ ಆಗುತ್ತಿ. ಆ ಸಕಲ ಜೀವರಾಶಿಗಳಿಗೆ ನೀನೇ ಒಂದು ನಿಯಮವನ್ನೂ ಮಾಡಿಕೊಡು. ನಂತರ ಅದುವೇ ಮನುಸ್ಮೃತಿಯಾಗುತ್ತದೆ’ ಎಂದು ಅಂತರ್ಧಾನವಾಗುತ್ತದೆ.
ಅದೇ ಪ್ರಕಾರದಲ್ಲಿ ಪ್ರಳಯವೂ ನಡೆಯುತ್ತದೆ, ಮತ್ತೆ ಜೀವ ರಾಶಿಯ ಸೃಷ್ಟಿಯೂ ಆಗುತ್ತದೆ. ಅದರ ಫಲವೇ ನಾವು. ಇಂತಹ ಮನುವನ್ನು ತುಚ್ಛವಾಗಿ ನಿಂದಿಸುವ ಪರ ಪೀಡಕರು ಇದ್ದರೇನು, ಸತ್ತರೇನು? ನೀವೇ ಹೇಳಿ. ಮನುಸ್ಮೃತಿಯು ಕಾಲ ಕಾಲಕ್ಕೆ ಅನೇಕ ಪರಿವರ್ತನೆ ಆಗಿದೆ, ಮುಂದೆಯೂ ಆಗಲಿದೆ. ಆದರೆ ತತ್ವ ಒಂದೆ. ಜಗತ್ತಿನ ಸ್ವಾಸ್ಥ್ಯ. ಜಗತ್ತು ಉದ್ಧಾರವಾಗಲೆಂದೇ ಅಂದು ಜೀವರಾಶಿಗಳ ಸೃಷ್ಟಿಯೂ, ಅದಕ್ಕೆ ಬೇಕಾದ ನಿಯಮ (ಶಾಸನ) ಸೃಷ್ಟಿಯಾಯಿತು. ಕಾಲ ಕ್ರಮೇಣ ಅದರಲ್ಲೂ ಪರಿವರ್ತನೆಗಳೂ ಆಯಿತು. ಆದರೆ ಮೂಲ ಉದ್ದೇಶ ಹಾಳಾಗಲಿಲ್ಲ.
ಈಗ ಪ್ರಗತಿ ಪರರು ಮನು ಎಂಬವ ದರಿದ್ರ, ಅದು ಬ್ರಾಹ್ಮಣರ ಪರ ಎಂದು ಒದರುವುದು ಅವರವರ ಅಜ್ಞಾನದ ಫಲವೇ ಹೊರತು, ಮನುಸ್ಮೃತಿ ಇರುವುದು ಜಗತ್ತಿನ ಸ್ವಾಸ್ಥ್ಯಕ್ಕಾಗಿ ಮಾತ್ರ. ಯಾರ್ಯಾರನ್ನೋ ಪಿತಾಮಹ ಎಂದರೆ ಅದಕ್ಕೆ ಸಮ್ಮತಿ ಇದೆ, ಶೆರಿಯತ್ ಕಾನೂನಿಗೆ ಬೆಂಬಲ ಇದೆ. ಆದರೆ ಜಗತ್ತಿನ ಮೂಲ ಪುರುಷ ವೈವಸ್ವತ ಮನು ಮಾತ್ರ ಮೂಢ ಎಂದಾದದ್ದು ಖೇದಕರ. ಅಲ್ಲ ಅಲ್ಲಾ, ಇದನ್ನು ಈ ಮೂಢರಿಗೆ ಮನುವಿನೊಳಗಿನ ಅಂತರಾರ್ಥ ತಿಳಿಯದ ದೋಷ ಎನ್ನಬಹುದು. ಈಗ ಮತ್ತೆ ಆ ಶಾಸನಕ್ಕೆ ಕಾಲಕ್ಕೆ ತಕ್ಕಂತಹ ಪರಿವರ್ತನೆಯೊಂದಿಗೆ ಅರ್ಥ ಬರುವ ಸುಸಮಯ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post