ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯು 2021ನೇ ಸಾಲಿನಲ್ಲಿ ಕೆಳಕಂಡ ದಿನಾಂಕಗಳಂದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮಾಂಸ ರಹಿತ ದಿನಗಳೆಂದು ಘೋಷಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಜನವರಿ 30 ರಂದು ಸರ್ವೋದಯ ದಿನ (ಗಾಂಧೀಜಿ ಪುಣ್ಯತಿಥಿ), ಮಾರ್ಚ್ 11 ಮಹಾಶಿವರಾತ್ರಿ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ, ಏ.21 ಶ್ರೀ ರಾಮ ನವಮಿ ಮತ್ತು ಏ. 25 ಮಹಾವೀರ ಜಯಂತಿ, ಮೇ 26 ಬುದ್ಧ ಪೂರ್ಣಿಮ ಜಯಂತಿ, ಆಗಸ್ಟ್ 30 ಶ್ರೀಕೃಷ್ಣ ಜನ್ಮಾಷ್ಠಮಿ, ಸೆಪ್ಟಂಬರ್ 10 ಗಣೇಶ ಚತುರ್ಥಿ, ಅಕ್ಟೋಬರ್ 02 ಗಾಂಧಿ ಜಯಂತಿ ಹಾಗೂ ನವೆಂಬರ್ 5 ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ.ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಆಯಾ ದಿನಾಂಕಗಳಂದು ಸ್ಥಗಿತಗೊಳಿಸುವಂತೆ ಹಾಗೂ ಆದೇಶವನ್ನು ಉಲ್ಲಂಘಿಸಿ, ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post