ಭಾರತ ಎಂದು ಕರೆದರೆ ಏನೂ ತಪ್ಪಿಲ್ಲ. ಹಾಗೆಯೇ ಇಂಡಿಯಾ ಎಂದು ಕರೆದರೂ ತಪ್ಪಿಲ್ಲ. ಈ ಸಣ್ಣ ವಿಚಾರಕ್ಕೆ ಕಾಂಗ್ರೆಸ್‍ನವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅತಿ ಬುದ್ಧಿವಂತರು ಈ ರೀತಿ ಹೇಳಿಕೆ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಸನಾತನ ಧರ್ಮ ಎಂಬುದು ದೇವರಲ್ಲಿ ನಂಬಿಕೆ ಇಡುವಂಥದ್ದು ಸ್ಟಾಲಿನ್ ತಾಯಿಯೇ ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿಬರುತ್ತಾರೆ ಎಂದರು.
Also read: ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಿರುವುದು ದ್ವೇಷದ ರಾಜಕಾರಣವಾಗಿದೆ: ಡಿ.ಎಸ್. ಅರುಣ್ ದೂರು
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದೆ ಇಡುತ್ತಾರೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವತ್ತೂ ಚುನಾವಣೆಗಾಗಿ ರಾಜಕಾರಣ ಮಾಡಿಲ್ಲ. ಧರ್ಮವನ್ನು ಅಡ್ಡ ತಂದಿಲ್ಲ. ರಾಮಮಂದಿರವನ್ನು ಚುನಾವಣೆಗೋಸ್ಕರ ಕಟ್ಟುವುದೂ ಇಲ್ಲ. ಅದು ಅನೇಕ ವರ್ಷಗಳ ಹೋರಾಟ ಎಂದರು.
ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು,ರಾಜ್ಯ ಸರ್ಕಾರ ರೈತರ ಹಿತ ಕಾಪಾಡುತ್ತದೆ ಎಂದುಕೊಂಡಿದ್ದೆವು. ಆದರೆ ಅದು ವಿಫಲವಾಗಿದೆ ಎಂದರು.
ಬರಗಾಲ ಘೋಷಣೆ ಬಗ್ಗೆ ದಿನ ತಳ್ಳುತ್ತಿದ್ದಾರೆ. ಆದಷ್ಟು ಬೇಗ ಇಡೀ ರಾಜ್ಯವನ್ನು ಬರಗಾಲ ಎಂದು ಘೋಸಿಸಬೇಕು ಎಂದ ಅವರು, ಸಚಿವ ಶಿವಾನಂದ್ ಪಾಟೀಲ್ ರೈತರ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅಧಿಕಾರದ ಮದ ತಲೆಗೆ ಏರಿದಾಗ ಇಂತಹ ಮಾತುಗಳು ಬರುತ್ತವೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















