ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಶ್ರೀರಾಮುಲು #Shriramulu ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಬಳ್ಳಾರಿಯ ಗ್ರಾಮದೇವತೆ ಶ್ರೀಕನಕ ದುರ್ಗಮ್ಮ ದೇವಿಯ ದೇವಸ್ಥಾನಕ್ಕೆ ಇಂದು ಮುಂಜಾನೆ ಭೇಟಿ ನೀಡಿದ ಶ್ರೀರಾಮಲು ನಾಮಪತ್ರ ದೇವರ ಮುಂದಿರಿಸಿ, ಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಎಸ್’ಪಿ ಸರ್ಕಲ್’ನಿಂದ ಹೊರಟ ಬೃಹತ್ ಮೆರವಣಿಗೆ ರಾಯಲ್ ಸರ್ಕಲ್ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಶ್ರೀರಾಮುಲು ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
Also read: 30 ಸಚಿವರನ್ನೂ ಬಳ್ಳಾರಿಗೆ ಕರೆತಂದು ಪ್ರಚಾರ ಮಾಡಿದರೂ… ವಿಜಯೇಂದ್ರ ಹೇಳಿದ್ದೇನು?
ಶ್ರೀರಾಮುಲು ಅವರೊಂದಿಗೆ ಮಾಜಿ ಸಚಿವರಾದ ಆನಂದ್ ಸಿಂಗ್ ಅವರು, ಶಾಸಕರಾದ ನೆಮೀರಾಜ್ ನಾಯಕ್, ಬಿಜೆಪಿ ಮುಖಂಡರಾದ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಅವರು ಉಪಸ್ಥಿತರಿದ್ದರು.
ಇನ್ನು, ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಸುಡುವ ಬಿರುಬಿಸಲನ್ನೂ ಲೆಕ್ಕಿಸದೇ ಸಾವಿರಾರು ಮಂದಿ ನೆರೆದಿದ್ದು, ಎಲ್ಲೆಲ್ಲೂ ಘೋಷಣೆಗಳು ಮೊಳಗಿದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















