ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರೀಯ ಧ್ವಜಸ್ತಂಭದಲ್ಲಿ #NationalFlag ಇಂದು ರಾಷ್ಟ್ರ ಧ್ವಜಾರೋಹಣ ಮಾಡಲಾಗಿದ್ದು, ಈ ಮೂಲಕ ಮುತ್ತಿನ ನಗರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ #MahalingeshwaraTemple ಎದುರಿನ ನೆಲ್ಲಿಕಟ್ಟೆಯ ಉದ್ಯಾನವನದಲ್ಲಿ ಈ ಮಾಸದ ಅರಂಭದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲಾಗಿತ್ತು. ಇಂದು ಮುಂಜಾನೆ ಧ್ವಜಾರೋಹಣ ಮಾಡಲಾಯಿತು.
ಶಾಸಕ ಅಶೋಕ್ ಕುಮಾರ್ ರೈ #AshokKumarRai ಅವರು ಇಂದು ರಾಷ್ಟ್ರಧ್ವಜವನ್ನು ಹಾರಿಸಿದ್ದು, ನೆರೆದಿದ್ದವರಲ್ಲಿ ಸಂಭ್ರಮ ಮನೆ ಮಾಡಿತ್ತು.
ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭ
ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಸ್ಥಾಪಿಸಲಾಗಿರುವ ಈ ಧ್ವಜಸ್ತಂಭ ಕರ್ನಾಟಕ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜಸ್ತಂಭವಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಾಜ್ಯ ಮೂರನೇ ಅತಿ ಎತ್ತರದ ಧ್ವಜ ಸ್ತಂಭ ಇದಾಗಿದ್ದು, 80 ಮೀಟರ್ ಎತ್ತರದ ಬೃಹತ್ ಗಾತ್ರದ್ದಾಗಿದೆ.
2,400 ಚದರ ಅಡಿ ಅಳತೆಯ ರಾಷ್ಟ್ರಧ್ವಜವನ್ನು ಧ್ವಜಸ್ತಂಭದ ಮೇಲೆ ಹಾರಿಸಲಾಗಿದೆ. ಇಲ್ಲಿ ಹಾರಿಸುವ ಪ್ರತಿ ಧ್ವಜಕ್ಕೆ 60,000 ರೂ. ವೆಚ್ಚವಾಗುತ್ತದೆ ಮತ್ತು ಅದನ್ನು ವರ್ಷಕ್ಕೆ ಮೂರು ಬಾರಿ ಬದಲಾಯಿಸಬೇಕಾಗುತ್ತದೆ.
ಈ ಮಾಸದ ಆರಂಭದಲ್ಲಿ ಬೃಹತ್ ಕ್ರೇನ್ ಬಳಸಿ ಈ ಧ್ವಜಸ್ತಂಭವನ್ನು ಸ್ಥಾಪನೆ ಮಾಡಲಾಗಿತ್ತು. ಆನಂತರ ಫೆ.1ರ ಭಾನುವಾರ ಸ್ವಲ್ಪ ಸಮಯದವರೆಗೂ ಪ್ರಾಯೋಗಿಕವಾಗಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಇಂದು ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ ಧ್ವಜವನ್ನು ಹಾರಿಸಲಾಗಿದೆ.
ಸಂಜೆಯ ವೇಳೆಯೂ ಸಹ ಸುಂದರವಾಗಿ ಕಾಣಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಬೇರೆ ಯಾವುದೇ ತಾಲೂಕು ಮಟ್ಟದ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿಲ್ಲ. ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರೀಯ ಧ್ವಜಸ್ತಂಭವನ್ನು ಹೊಂದಿರುವ ನಗರ ಎಂಬ ಖ್ಯಾತಿಗೆ ಈಗ ಪುತ್ತೂರು ಪಾತ್ರವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















