ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪಂಚರಾಜ್ಯ ಚುನಾವಣೆಯ ತೀರ್ಪು ದೇಶದ ದಿಕ್ಕನ್ನೇ ಬದಲಾವಣೆ ಮಾಡಲಿದ್ದು, ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ #WestBengal ಇಂದಿನಿಂದ ಹೊಸ ಸೂರ್ಯ ಉದಯಿಸಲಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ #NarendraModi ಸಂತಸ ವ್ಯಕ್ತಪಡಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, #Assam ಪುದುಚೇರಿಗಳಲ್ಲಿ ಅಭೂತಪೂರ್ವ ಜಯ ದಾಖಲಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಶ್ಚಿಮ ಬಂಗಾಳದ ವಿಚಾರದಲ್ಲಿ ಇಂದು ಐತಿಹಾಸಿಕ ದಿನವಾಗಿದ್ದು, ಇಂದಿನಿಂದ ರಾಜ್ಯದಲ್ಲಿ ಹೊಸ ಯುವ ಆರಂಭವಾಗಲಿದೆ. ಬಂಗಾಳದ ಜನ ನಂಬಿಕೆಯಿಟ್ಟು ನಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ನಂಬಿಕೆ ಉಳಿಸಿಕೊಳ್ಳುತ್ತೇವೆ ಎಂದರು.
ಶೇ.93ರಷ್ಟು ಮತದಾನವಾಗಿರುವುದು ಒಂದು ಐತಿಹಾಸಿಕ ಘಟನೆ. ಅಸ್ಸಾಂನಲ್ಲಿ ಅತಿ ದೊಡ್ಡ ಇತಿಹಾಸವನ್ನು ಅಲ್ಲಿನ ಜನ ನಿರ್ಮಿಸಿದ್ದಾರೆ. ಇದು ಇತಿಹಾಸದ ಅತಿ ದೊಡ್ಡ ಘಟನೆಯಾಗಿದೆ. ಅಸ್ಸಾಂ ದೇವಿ ಕಾಮಾಕ್ಯ ನಮಗೆ ಆರ್ಶೀದಿಸಿದ್ದು, ಬಿಜೆಪಿಯನ್ನು ಅಲ್ಲಿನ ಜನ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದರು.
ನಾಗರೀಕ ದೇವೋ ಭವ ಎನ್ನುವುದು ನಮ್ಮ ಮಂತ್ರವಾಗಿದ್ದು, ಜನರ ಸೇವೆ ಮಾಡುವುದೇ ನಮ್ಮ ಸಂಕಲ್ಪವಾಗಿದೆ. ಹೀಗಾಗಿಯೇ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲಿ ಬಿಜೆಪಿ ಇರುತ್ತದೋ ಅಲ್ಲಿ ಉತ್ತಮ ಆಡಳಿತ, ಎಲ್ಲಿ ಬಿಜೆಪಿ ಇರುತ್ತದೋ ಅಲ್ಲಿ ಅಭಿವೃದ್ಧಿ ಸಾಗುತ್ತಿರುತ್ತದೆ ಎಂದರು.
Also Read>> ಸಾರ್ವಜನಿಕ ಉದ್ಯಮಗಳ ಸಮಿತಿಗೆ ಸಂಸದ ಬಿ.ವೈ. ರಾಘವೇಂದ್ರ ಸತತ ಮೂರನೇ ಬಾರಿಗೆ ಆಯ್ಕೆ
ಇನ್ನು, ಪುದುಚೇರಿಯಲ್ಲಿ ಅಲ್ಲಿನ ಜನರ ಎನ್’ಡಿಎಗೆ ಮತ್ತೆ ಆರ್ಶೀವಾದ ಮಾಡಿದ್ದಾರೆ. ಪುದುಚೇರಿ ಜನರನ್ನು ಅಭಿನಂದಿಸುತ್ತೇನೆ. ಪುದುಚೇರಿಯ ಅಭಿವೃದ್ಧಿಗಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ ಎಂದು ಅಲ್ಲಿನ ಜನರಿಗೆ ನಾನು ಮಾತು ನೀಡುತ್ತೇನೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಇಂದು ಶ್ಯಾಮಪ್ರಸಾದ ಮುಖರ್ಜಿ ಅವರ ಆತ್ಮಕ್ಕೆ ನಿಜವಾಗಲೂ ಶಾಂತಿ ದೊರೆತಿರುತ್ತದೆ ಎಂದರು.
ಇದೇ ವೇಳೆ ಗುಜರಾತ್’ನಲ್ಲೂ ಸಹ ಸ್ಥಳೀಯ ಚುನಾವಣೆಯಲ್ಲಿ ಜನರು ನಮಗೆ ಜನಾದೇಶ ನೀಡಿದ್ದಾರೆ. ಜನ ಬಿಜೆಪಿ ಮೇಲೆ ಮೊದಲಿಗಿಂತಲೂ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಈ ನಂಬಿಕೆಯನ್ನು ಉಳಿಸಿಕೊಳ್ಳಲು ನಾವು ನಿರಂತರವಾಗಿ ಶ್ರಮಿಸುತ್ತೇವೆ. ಇಂದು 20ಕ್ಕೂ ಅಧಿಕ ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇದ್ದೇವೆ. ಭದ್ರತೆ ಹಾಗೂ ಅಭಿವೃದ್ಧಿಗಾಗಿ ಜನರು ನಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಇಂದಿನಿಂದ ಬಂಗಾಳ ಭಯಮುಕ್ತವಾಗಿದೆ. ಈಗಿನಿಂದ ಅಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ಭರವಸೆ ನೀಡಿದರು.
ಇಷ್ಟು ವರ್ಷಗಳ ಕಾಲ ಪಶ್ಚಿಮ ಬಂಗಾಳ ಹೇಗಿತ್ತು ಎಂದು ನೆನಪಿಸಿಕೊಳ್ಳಿ. ಎಷ್ಟು ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಅತ್ಯಾಚಾರ, ಅನೀತಿ, ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿತ್ತು. ಹೀಗಾಗಿ, ಜನರು ಬದಲಾವಣೆಯನ್ನು ಬಯಸಿ, ನಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ. ಇಂದಿನಿಂದ ಬಂಗಾಳದಲ್ಲಿ ಹೊಸ ಯುಗ ಆರಂಭವಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















