ಕಲ್ಪ ಮೀಡಿಯಾ ಹೌಸ್ | ಯಶವಂತಪುರ/ಶಿವಮೊಗ್ಗ |
ಈವರೆಗೂ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದ ಯಶವಂತಪುರ-ತಾಳಗುಪ್ಪ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಇನ್ಮುಂದೆ ಶಾಶ್ವತ ಸೇವೆಯಾಗಿ ಸಂಚರಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, 06587/06588 ಸಂಖ್ಯೆಯ ಯಶವಂತಪುರ-ತಾಳಗುಪ್ಪ-ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ರೈಲನ್ನು ಶಾಶ್ವತ ಸೇವೆಯಾಗಿ ನಿಯಮಿತಗೊಳಿಸಲು ಅನುಮೋದಿಸಿದೆ. ಇದರಂತೆ ಈ ರೈಲುಗಳಿಗೆ ಹೊಸ ಸಂಖ್ಯೆಗಳಾಗಿ ರೈಲು ಸಂಖ್ಯೆಗಳು 16555/16556 ಯಶವಂತಪುರ-ತಾಳಗುಪ್ಪ-ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ಎಂದು ಮರುಸಂಖ್ಯೆ ನೀಡಲಾಗಿದೆ.
Also Read>> ಹರಿಹರ-ಹೊಸಪೇಟೆ, ಧಾರವಾಡ-ಬೆಂಗಳೂರು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
16555 ಹೊಸ ರೈಲು ಸಂಖ್ಯೆಯ ಯಶವಂತಪುರ–ತಾಳಗುಪ್ಪ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು 15.05.2026 ರಿಂದ ಪ್ರತಿ ಶುಕ್ರವಾರ ಯಶವಂತಪುರದಿಂದ ರಾತ್ರಿ 22:45 ಗಂಟೆಗೆ ಹೊರಡಲಿದ್ದು, ಮುಂದಿನ ದಿನ ಬೆಳಿಗ್ಗೆ 05:30 ಗಂಟೆಗೆ ತಾಳಗುಪ್ಪ ತಲುಪಲಿದೆ.
ಮಧ್ಯಂತರದಲ್ಲಿ ಈ ರೈಲು ತುಮಕೂರು (23:33/23:35), ತಿಪಟೂರು (00:30/00:32), ಅರಸೀಕೆರೆ ಜಂಕ್ಷನ್ (00:55/00:57), ಬೀರೂರು ಜಂಕ್ಷನ್ (01:33/01:35), ತರೀಕೆರೆ (02:00/02:02), ಭದ್ರಾವತಿ (02:20/02:22), ಶಿವಮೊಗ್ಗ ಟೌನ್ (02:45/02:50), ಆನಂದಪುರಂ (03:50/03:52) ಹಾಗೂ ಸಾಗರ ಜಂಬಗಾರು (04:23/04:25) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
16556 ಹೊಸ ರೈಲು ಸಂಖ್ಯೆಯ ತಾಳಗುಪ್ಪ–ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು 16.05.2026 ರಿಂದ ಪ್ರತಿ ಶನಿವಾರ ತಾಳಗುಪ್ಪದಿಂದ ಬೆಳಿಗ್ಗೆ 10:00 ಗಂಟೆಗೆ ಹೊರಡಲಿದ್ದು, ಸಂಜೆ 17:15 ಗಂಟೆಗೆ ಯಶವಂತಪುರ ತಲುಪಲಿದೆ.
ಮಧ್ಯಂತರದಲ್ಲಿ ಸಾಗರ ಜಂಬಗಾರು (10:16/10:18), ಆನಂದಪುರಂ (10:46/10:48), ಶಿವಮೊಗ್ಗ ಟೌನ್ (12:00/12:05), ಭದ್ರಾವತಿ (12:23/12:25), ತರೀಕೆರೆ (12:45/12:47), ಬೀರೂರು ಜಂಕ್ಷನ್ (13:13/13:15), ಅರಸೀಕೆರೆ ಜಂಕ್ಷನ್ (14:00/14:05), ತಿಪಟೂರು (14:25/14:27) ಹಾಗೂ ತುಮಕೂರು (14:43/14:45) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು
ಬೆಂಗಳೂರು–ಅಶೋಕಪುರಂ ತ್ರೈ ಸಾಪ್ತಾಹಿಕ ಮೆಮು ವಿಶೇಷ ರೈಲು ಶಾಶ್ವತ ಸೇವೆ
ಇದೇ ರೀತಿಯಾಗಿ 06213/06214 ಸಂಖ್ಯೆಯ ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ– ಕೆಎಸ್‌ಆರ್ ಬೆಂಗಳೂರು ತ್ರೈ ಸಾಪ್ತಾಹಿಕ ಮೆಮು ವಿಶೇಷ ರೈಲುಗಳನ್ನು ಸಹ ಶಾಶ್ವತ ಸೇವೆಯಾಗಿ ನಿಯಮಿತಗೊಳಿಸಿ, 66539/66540 ಎಂದು ಮರುಸಂಖ್ಯೆ ನೀಡಲಾಗಿದೆ.
66539 ಸಂಖ್ಯೆಯ ಕೆಎಸ್‌ಆರ್ ಬೆಂಗಳೂರು–ಅಶೋಕಪುರಂ ತ್ರೈ ಸಾಪ್ತಾಹಿಕ ಮೆಮು ರೈಲು 15.05.2026 ರಿಂದ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 12:15 ಗಂಟೆಗೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡಲಿದ್ದು, 15:40 ಗಂಟೆಗೆ ಅಶೋಕಪುರಂ ತಲುಪಲಿದೆ.
ಮಧ್ಯಂತರದಲ್ಲಿ ಕೃಷ್ಣದೇವರಾಯ ಹಾಲ್ಟ್ (12:21/12:22), ನಾಯಂಡಹಳ್ಳಿ (12:29/12:30), ಜ್ಞಾನಭಾರತಿ (12:33/12:34), ಕೆಂಗೇರಿ (12:39/12:41), ಹೆಜ್ಜಾಲ (12:51/12:52), ಬಿಡದಿ (12:58/12:59), ಕೇತೋಹಳ್ಳಿ (13:05/13:06), ರಾಮನಗರಂ (13:12/13:13), ಚನ್ನಪಟ್ಟಣ (13:23/13:24), ಸೆಟ್ಟಿಹಳ್ಳಿ (13:31/13:32), ನಿಡಘಟ್ಟ ಹಾಲ್ಟ್ (13:38/13:39), ಮದ್ದೂರು (13:46/13:47), ಹನಕೆರೆ (13:57/13:58), ಮಂಡ್ಯ (14:08/14:10), ಎಲಿಯೂರು (14:19/14:20), ಬ್ಯಾಡರಹಳ್ಳಿ (14:30/14:31), ಪಾಂಡವಪುರ (14:41/14:42), ಶ್ರೀರಂಗಪಟ್ಟಣ (14:47/14:48), ನಾಗನಹಳ್ಳಿ (14:53/14:54), ಮೈಸೂರು ಜಂಕ್ಷನ್ (15:05/15:10) ಹಾಗೂ ಚಾಮರಾಜಪುರಂ (15:16/15:17) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ. 66540 ಅಶೋಕಪುರಂ–ಕೆಎಸ್‌ಆರ್ ಬೆಂಗಳೂರು ತ್ರೈ ಸಾಪ್ತಾಹಿಕ ಮೆಮು ರೈಲು 15.05.2026 ರಿಂದ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಅಶೋಕಪುರಂ ನಿಲ್ದಾಣದಿಂದ 16:10 ಗಂಟೆಗೆ ಹೊರಡಲಿದ್ದು, 20:00 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
Also Read>> ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ನಿಷೇಧ, ಹಿಜಾಬ್’ಗೆ ಅವಕಾಶ | ಸರ್ಕಾರ ಆದೇಶ
ಮಾರ್ಗ ಮಧ್ಯದಲ್ಲಿ ಚಾಮರಾಜಪುರಂ (16:15/16:16), ಮೈಸೂರು ಜಂಕ್ಷನ್ (16:25/16:30), ನಾಗನಹಳ್ಳಿ (16:40/16:41), ಶ್ರೀರಂಗಪಟ್ಟಣ (16:46/16:47), ಪಾಂಡವಪುರ (16:53/16:54), ಬ್ಯಾಡರಹಳ್ಳಿ (17:05/17:06), ಎಲಿಯೂರು (17:20/17:21), ಮಂಡ್ಯ (17:28/17:30), ಹನಕೆರೆ (17:39/17:40), ಮದ್ದೂರು (17:47/17:48), ನಿಡಘಟ್ಟ ಹಾಲ್ಟ್ (17:52/17:53), ಸೆಟ್ಟಿಹಳ್ಳಿ (17:59/18:00), ಚನ್ನಪಟ್ಟಣ (18:07/18:08), ರಾಮನಗರಂ (18:18/18:19), ಕೇತೋಹಳ್ಳಿ (18:26/18:27), ಬಿಡದಿ (18:36/18:37), ಹೆಜ್ಜಾಲ (18:47/18:48), ಕೆಂಗೇರಿ (18:58/18:59), ಜ್ಞಾನಭಾರತಿ (19:04/19:05), ನಾಯಂಡಹಳ್ಳಿ (19:09/19:10) ಹಾಗೂ ಕೃಷ್ಣದೇವರಾಯ ಹಾಲ್ಟ್ (19:14/19:15) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















