ಕಲ್ಪ ಮೀಡಿಯಾ ಹೌಸ್
ಹಿರಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೊಲದ ಮಾಲೀಕರು ಬಾರದೆ ಶವ ತೆಗೆಯದಂತೆ ಸಂಬಂಧಿಕರು ಪಟ್ಟು ಹಿಡಿದ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಕಿರಣ್ ಕುಮಾರ್ (40) ಮೃತ ವ್ಯಕ್ತಿ. ಮೃತ ಕಿರಣ್ ಕುಮಾರ್ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದು ಮರ ಕಡಿಯಲು ಇಂದು ದಿನಗೂಲಿ ಕೆಲಸಕ್ಕೆಂದು ಬಂದಿದ್ದ. ಮರ ಹತ್ತಿ ಕೊನೆಯನ್ನು ಕಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಮರದಿಂದ ಕೆಳಗಡೆ ಬಿದ್ದು ಸ್ಥಳದಲ್ಲೇ ಸಾವನಪಿದ್ದಾನೆ. ಕೂಲಿ ಕಾರ್ಮಿಕನ ಸಂಬಂಧಿಕರು ಜಮೀನಿನ ಮಾಲೀಕರು ಬಾರದೇ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದರು. ಸ್ಥಳಕ್ಕೆ ಹಬ್ಬಿನಹೊಳೆ ಪಿಎಸ್’ಐ ಪರಶುರಾಂ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನೀಡಿದಾಗ ಪೋಲಿಸರು ಹಾಗೂ ಸಂಬಂಧಿಕರ ನಡುವೆ ಮಾತಿನ ವಾಗ್ವಾದ ನಡೆಯಿತು.
ನಂತರ ಜಮೀನಿನ ಮಾಲೀಕನ ವಿರುದ್ಧ ಕ್ರಮಕೈಗೊಂಡು ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಶವವನ್ನು ಅಲ್ಲಿಂದ ಸಾಗಿಸಿದ್ದಾರೆ.
ಹಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಸುರೇಶ್ ಬೆಳಗೆರೆ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















