ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಪತ್ತು ಕ್ರೋಢೀಕರಣದ ಭಾಗವಾಗಿ ಅಬಕಾರಿ ಸುಂಕವನ್ನು ಏರಿಕೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ Alcohol Lovers ಬಿಗ್ ಶಾಕ್ ನೀಡಿದೆ.
ಬಜೆಟ್ ಭಾಷಣದಲ್ಲಿ ಈ ಘೋಷಣೆ ಮಾಡಿರುವ ಸಿಎಂ ಸಿದ್ದರಾಮಯ್ಯ, CM Siddaramaiah ಬಿಯರ್ Beer ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.10 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದ್ದಾರೆ.
ಬೆಲೆ ಏರಿಕೆಯಂತೆ Price hike 650 ಎಂಎಲ್ ಬಿಯರ್ ಬಾಟಲಿಗೆ 8 ರಿಂದ 10 ರೂಪಾಯಿ ವರೆಗೆ ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದ್ದರಿಂದ ಮದ್ಯ ಪ್ರಿಯರ ಜೇಬಿಗೆ ಹೊರೆ ಬೀದ್ದಿದೆ.
Also read: ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಬಜೆಟ್ | ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಪಟ್ಟಿ
ಈ ಸಂಬಂಧ ರಾಜ್ಯ ಸರ್ಕಾರ ಜನವರಿ 20, 2024 ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಬೀಯರ್ ಮೇಲಿನ ದರವನ್ನು ಹೆಚ್ಚಿಸಲು ಸರ್ಕಾರ ಮಂದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರನೇ ಬಾರಿಗೆ ಬಿಯರ್ ದರವನ್ನು ಹೆಚ್ಚಿಸಿದೆ.
2023ರ ಜುಲೈ 7 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್’ನಲ್ಲಿ ಬಿಯರ್ ಮೇಲಿನ ಅಬಕಾರಿ ಸುಕಂವನ್ನು ಶೇ.20 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಈ ಬಾರಿಯ ಬಜೆಟ್’ನಲ್ಲೂ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿ ಮಧ್ಯ ಪ್ರಿಯರಿಗೆ ಶಾಕ್ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post