ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನ ಸಂದರ್ಭದಲ್ಲಿ ಕಷ್ಟಪಟ್ಟು ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಭಿನಂದನೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ಎರಡನೆಯ ಅಲೆ ಪ್ರಾರಂಭವಾಗಿದ್ದು, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ ಶೇ.80ರಷ್ಟು ಪೊಲೀಸರು ಕೊರೋನಾ ಲಸಿಕೆ ಪಡೆದಿದ್ದಾರೆ. ಹಾಗೂ ಕೊರೋನಾ ಕುರಿತ ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಲು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇತರರಿಗೂ ಲಸಿಕೆ ಬಗ್ಗೆ ಮನವರಿಕೆ ಮಾಡಿ ವ್ಯಾಕ್ಸಿನೇಷನ್ ಕೊಡಿಸಬೇಕು. ಡಿಸಿ ಜೊತೆ ಚರ್ಚಿಸಿ ಸಾರ್ವಜನಿಕವಾಗಿ ಕೊರೋನ ನಿಯಮಾವಳಿಯನ್ನು ಪಾಲಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪೊಲೀಸ್ ಆಯುಕ್ತಾಲಯಕ್ಕೆ ತಾಂತ್ರಿಕ ಸಮಸ್ಯೆ:
ಶಿವಮೊಗ್ಗದಲ್ಲಿನ ಕೆಲ ಸಮಸ್ಯೆಗಳನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಕೆಲವು ಹುದ್ದೆಗಳ ಭರ್ತಿ ಕಾರ್ಯ ಆಗಬೇಕಿದೆ. ಯಾವ ಠಾಣೆಯಲಿ ಮ್ಯಾನ್ ಪವರ್ ಸಮಸ್ಯೆ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರಕರಣಗಳನ್ನು ಹೇಗೆ ವಿಲೇ ಮಾಡಬೇಕು, ಗಾಂಜಾ ಪ್ರಕರಣವನ್ನು ನಿಭಾಯಿಸುವ ವೈಖರಿಯನ್ನು ಕಾದು ನೋಡಬೇಕಿದೆ. ಹಿಂದಿನ ಎಸ್‌ಪಿಯಿಂದ ಒಳ್ಳೆಯ ಕೆಲಸವಾಗಿದೆ. ಶಿವಮೊಗ್ಗದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಿಸುವುದು ಸರ್ಕಾರದ ನಿರ್ಧಾರವಾಗಿದೆ. ಆಯುಕ್ತಾಲಯದ ರಚನೆ ಕುರಿತು ತಾಂತ್ರಿಕ ಸಮಸ್ಯೆಗಳಿದ್ದು, 10 ಲಕ್ಷ ಜನಸಂಖ್ಯೆ ಇರಬೇಕಿದೆ ಹಾಗಿದ್ದಾಗ ಮಾತ್ರ ಕಮಿಷನರೇಟ್ ಕಚೇರಿ ರಚನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಎಸ್‌ಐಟಿ ತನಿಖೆ ಬಗ್ಗೆ ಟೀಕೆ ಸರಿಯಲ್ಲ:
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣ ಕುರಿತಂತೆ ಎಸ್‌ಐಟಿ ತನಿಖೆ ವಿಚಾರ ಮಾತನಾಡಿದ ಡಿಐಜಿ ಪ್ರವೀಣ್ ಸೂದ್ ಎಸ್‌ಐಟಿ ಅವರು ನಿಷ್ಪಕ್ಷಪಾತವಾಗಿ, ಕಾನೂನು ಪ್ರಕಾರ, ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಾರೆ. ಹಾಗೂ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ತಲುಪಿಸುತ್ತಾರೆ. ಅವರ ಬಗ್ಗೆ ಸಾರ್ವಜನಿಕರು ಟೀಕೆ ಮಾಡಬಹುದು. ಆದರೆ ಪೊಲೀಸ್ ಅಧಿಕಾರಿಗಳು ಟೀಕೆ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಎಸ್‌ಐಟಿ ಬಗ್ಗೆ ಹೇಳುವುದಕ್ಕೆ ನಮ್ಮಲ್ಲಿ ಏನು ಇಲ್ಲ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post