ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕ್’ಗಳೇ ಹೊಣೆಯಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ #SupremeCourt ಮಹತ್ವದ ಆದೇಶ ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆದೇಶ ನೀಡಿರುವ ಘನ ನ್ಯಾಯಾಲಯ ಸೈಬರ್ ವಂಚನೆ #CyberCrime ಪ್ರಕರಣ ಕುರಿತಾಗಿ ಉಲ್ಲೇಖಿಸಿದೆ.
ಏನಿದು ಪ್ರಕರಣ?
ಅಸ್ಸಾಂನ ವ್ಯಕ್ತಿಯೊಬ್ಬರು ಆನ್ ಲೈನ್ #Online ಮೂಲಕ ವಸ್ತುವೊಂದನ್ನು ಖರೀದಿಸಿದ್ದರು. ಆದರೆ, ಅದರ ಕುರಿತಾಗಿ ಅಸಮಾಧಾನವಿದ್ದ ಕಾರಣ ಅದನ್ನು ಮರಳಿಸಲು ನಿರ್ಧರಿಸಿದ್ದರು.
Also Read>> ಶಿವಮೊಗ್ಗ | ಇ-ಸ್ವತ್ತು ಜನರ ಪರದಾಟಕ್ಕೆ ಪರಿಹಾರವೇ ಇಲ್ಲವೇ?
ಹೀಗೆ ಆ ವಸ್ತುವನ್ನು ಮರಳಿಸುವ ಪ್ರಕ್ರಿಯೆ ವೇಳೆ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಗೆ ಕರೆ ಮಾಡಿ ನಿರ್ಧಿಷ್ಟ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದ. ಅದರಂತೆ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ವ್ಯಕ್ತಿಗೆ ಆತ ಹೇಳಿದಂತೆ ಒಟಿಪಿ ಹಾಗೂ ಪಿನ್ ಸಹ ನೀಡಿದ್ದನು. ಇದಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯ ಖಾತೆಯಿಂದ 94,204 ರೂ.ವನ್ನು ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಆನ್ ಲೈನ್ ಮೂಲಕವೇ ಕದ್ದಿದ್ದ.
ತಕ್ಷಣವೇ ಎಚ್ಚೆತ್ತ ವ್ಯಕ್ತಿ ಈ ವಿಷಯವನ್ನು ನಿಯಮದಂತೆ 24 ಗಂಟೆಯೊಳಗೆ ಬ್ಯಾಂಕ್ ಗಮನಕ್ಕೆ ತಂದಿದ್ದನು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಬ್ಯಾಂಕ್’ನವರು ನೀವು ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಹೀಗಾಗಿ ಇದರಲ್ಲಿ ಬ್ಯಾಂಕ್ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಹೇಳಿತ್ತು. ಈ ಬಗ್ಗೆ ವ್ಯಕ್ತಿ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ವ್ಯಕ್ತಿಯ ಪರ ತೀರ್ಪು ನೀಡಿತ್ತು. ಇದನ್ನು ಸದರಿ ಬ್ಯಾಂಕ್ ಸುಪ್ರೀಂಕೋರ್ಟ್’ನಲ್ಲಿ ಪ್ರಶ್ನಿಸಿತ್ತು.
ಈ ಪ್ರಕರಣದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, #SupremeCourt ಮೂರನೇ ವ್ಯಕ್ತಿಯಿಂದಾದ ವಂಚನೆ ಪ್ರಕರಣಕ್ಕೆ ಗ್ರಾಹಕ ಹೊಣೆಯಾಗುವುದಿಲ್ಲ ಎಂದು ಆರ್’ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂತಹ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್’ಗಳ ಹೊಣೆಗಾರಿಕೆ ಆಗಿರುತ್ತದೆ.
ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಮೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಬ್ಯಾಂಕ್ #Bank ವಿಫಲವಾಗಿದೆ. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಬ್ಯಾಂಕ್’ಗೆ ನ್ಯಾಯಾಲಯ ಸೂಚಸಿದೆ.
ಇದೇ ವೇಳೆ ಇಂತಹ ವಿಚಾರಗಳಲ್ಲಿ ಗ್ರಾಹಕರೂ ಸಹ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪಿನ್, ಒಟಿಪಿಯಂತಹ #OTP ಸೂಕ್ಷ್ಮ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ನಿಮ್ಮ ಹಣದ ಜಾಗ್ರತೆ ಕುರಿತಾಗಿ ನೀವುಗಳೂ ಸಹ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post