ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ದಕ್ಷ, ಪ್ರಾಮಾಣಿಕ ಹಾಗೂ ಜನಪರ ಎಂದು ಗುರುತಿಸಿಕೊಂಡಿರುವ ನಗರಸಭಾ ಆಯುಕ್ತ ಮನೋಹರ್ ಅವರ ವರ್ಗಾವಣೆ ರದ್ದು ಮಾಡುವಂತೆ ಶಾಸಕ ಬಿ.ಕೆ. ಸಂಗಮೇಶ್ ಅವರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಮನೋಹರ್ ಅವರು ನಗರಸಭೆ ಆಯುಕ್ತರಾಗಿ ಬಂದ ನಂತರ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಾರೆ. ಕಸ ವಿಲೇವಾರಿ, ಪ್ಲಾಸ್ಟಿಕ್ ನಿಷೇಧ, ಕಂದಾಯ ನಿರ್ವಹಣೆ ಸೇರಿದಂತೆ ಹಲವಾರು ಐತಿಹಾಸಿಕ ಎನ್ನಬಹುದಾದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಜನಸಾಮಾನ್ಯರಿಗೆ ನಿಲುಕುವ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ಇವರ ವರ್ಗಾವಣೆ ಖಂಡನೀಯ ಎಂದರು.
ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಹೊಸ ಆಯುಕ್ತರು ನಗರಕ್ಕೆ ಬಂದು ಇಲ್ಲಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ತಿಂಗಳುಗಳ ಕಾಲ ಸಮಯ ಹಿಡಿಯುತ್ತದೆ. ಆದರೆ, ಮನೋಹರ್ ಅವರಿಗೆ ಇಲ್ಲಿಯ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ಧಾರೆ. ಹೀಗಾಗಿ ಇವರ ವರ್ಗಾವಣೆಯನ್ನು ತತಕ್ಷಣವೇ ರದ್ದು ಮಾಡಬೇಕು. ಈಬಗ್ಗೆ ರಾಜ್ಯಸರ್ಕಾರದೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಒಂದು ವೇಳೆ ಇವರ ವರ್ಗಾವಣೆ ರದ್ದಾಗದೆ ಇದ್ದಲ್ಲಿ ನಗರದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post