ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪಿತೃಪಕ್ಷದ ಪ್ರಯುಕ್ತ ಬೆಂಗಳೂರು (Bangalore) ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ‘ಗರುಡ ಪುರಾಣ’ ಧಾರ್ಮಿಕ ಪ್ರವಚನ (Discourse) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 27ರಿಂದ ವಿವಿಧ ದಿನಾಂಕಗಳವರೆಗೆ ನಡೆಯಲಿರುವ ಪ್ರವಚನಗಳಲ್ಲಿ ಆಚಾರ್ಯರು ‘ಗರುಡ ಪುರಾಣ’ದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಭಕ್ತರಿಗೆ ತಿಳಿಸಿಕೊಡಲಿದ್ದಾರೆ.
ಸುಧೀಂದ್ರನಗರದಲ್ಲಿ ಸೆ.27ರಿಂದ ಅ.10ರವರೆಗೆ
ಸುಧೀಂದ್ರನಗರದ ಶ್ರೀ ರಾಘವೇಂದ್ರ ಸೇವಾ ಸಮಿತಿ ವತಿಯಿಂದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ‘ಗರುಡ ಪುರಾಣ’ ಪ್ರವಚನ ಆಯೋಜಿಸಲಾಗಿದೆ. ಮ||ಶಾ||ಸಂ|| ಶ್ರೀ ಚಿಮ್ಮಲಗಿ ಆಚಾರ್ಯರು ಪ್ರವಚನ ನೀಡಲಿದ್ದಾರೆ.
ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಬೆಂಗಳೂರು.
ಸುಬ್ರಹ್ಮಣ್ಯನಗರದಲ್ಲಿ ಅ.3ರವರೆಗೆ ಪ್ರವಚನ
ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದ ವತಿಯಿಂದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಪ್ರವಚನ ನಡೆಯಲಿದೆ. ಮ||ಶಾ||ಸಂ|| ಶ್ರೀ ಧನಂಜಯಾಚಾರ್ಯರು ‘ಗರುಡ ಪುರಾಣ’ದ ಕುರಿತು ಪ್ರವಚನ ನೀಡಲಿದ್ದಾರೆ.
ಸ್ಥಳ: ಶ್ರೀ ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ, ಬೆಂಗಳೂರು.
Bangalore: ಮಲ್ಲೇಶ್ವರಂನಲ್ಲಿ ಅ.10ರವರೆಗೆ ಧಾರ್ಮಿಕ ಪ್ರವಚನ
ಮಲ್ಲೇಶ್ವರಂನ ಶ್ರೀಮನ್ಮಾಧ್ವ ಸಂಘದ ವತಿಯಿಂದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರವರೆಗೆ ಪ್ರತಿದಿನ ಸಂಜೆ 6.45ಕ್ಕೆ ‘ಗರುಡ ಪುರಾಣ’ ಪ್ರವಚನ ಏರ್ಪಡಿಸಲಾಗಿದೆ. ಮ||ಶಾ||ಸಂ|| ಶ್ರೀ ಚಂದ್ರಶೇಖರ ಆಚಾರ್ಯರು ಪ್ರವಚನ ನಡೆಸಿಕೊಡಲಿದ್ದಾರೆ.
Also read>> ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಬಸವಾದಿ ಶರಣರ ಆಶಯ: ಕೆ.ಎಚ್. ಪುಟ್ಟಪ್ಪ
ಸ್ಥಳ: ಮಾಧ್ವ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ವಿಜಯನಗರದಲ್ಲಿ ಸೆ.27ರಿಂದ ಅ.3ರವರೆಗೆ
ವಿಜಯನಗರದ ವಿಜಯ ಮಧ್ವ ಸಂಘದ ವತಿಯಿಂದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ‘ಗರುಡ ಪುರಾಣ’ ಪ್ರವಚನ ನಡೆಯಲಿದೆ. ಮ||ಶಾ||ಸಂ|| ಶ್ರೀ ಸಮೀರಾಚಾರ್ಯರು ಪ್ರವಚನ ನೀಡಲಿದ್ದಾರೆ.
ಸ್ಥಳ: ವಿಜಯ ಮಧ್ವ ಸಂಘ, 37/2, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರು.
ಪ್ರಕಾಶನಗರದಲ್ಲಿ ಪ್ರತಿದಿನ ಸಂಜೆ 7ಕ್ಕೆ
ಪ್ರಕಾಶನಗರದ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ‘ಗರುಡ ಪುರಾಣ’ ಪ್ರವಚನ ಆಯೋಜಿಸಲಾಗಿದೆ. ಮ||ಶಾ||ಸಂ|| ಶ್ರೀ ಹರಿ ಆಚಾರ್ಯರು ಪ್ರವಚನ ನೀಡಲಿದ್ದಾರೆ.
ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು.
ಪಿತೃಪಕ್ಷದ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ಧಾರ್ಮಿಕ ಪ್ರವಚನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










