ಬೈಂದೂರು: ಧೂಳಿನಿಂದ ಕೂಡಿ, ರಸ್ತೆಯನ್ನು ಸರಿಪಡಿಸಿ, ಧೂಳುಮುಕ್ತ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಚಾಲನೆ ನೀಡಿದ್ದಾರೆ.
ಜಡ್ಕಲ್ ಗ್ರಾಮ ಹಾಗೂ ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ಬೋಗಿಹಾಡಿ ಎಂಬಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಸಹಕಾರದಿಂದ 140 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿ ಅದರ ಗುದ್ದಲಿಪೂಜೆಯನ್ನು ಬೈಂದೂರು ಶಾಸಕರು ನೆರವೇರಿಸಿದರು.
ಅಗತ್ಯವಿರುವ ರಸ್ತೆಗಳಿಗೆ ಅನುದಾನ ಮಂಜೂರು ಮಾಡಿಸಿ ಧೂಳು ಮುಕ್ತ ರಸ್ತೆ ಸಾರ್ವಜನಿಕರಿಗೆ ಕಲ್ಪಿಸುತ್ತಿರುವ ಶಾಸಕರ ನಡೆಗೆ ಹೊಸೂರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಸಂಸದರು ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚೆಕ್ ಹಸ್ತಾಂತರ
ಅನಾರೋಗ್ಯದಿಂದ ಬಳಲುತ್ತಿದ್ದ ವಂಡ್ಸೆ ಗ್ರಾಮದ ಲೀಲಾವತಿ ಸಂಜೀವ ಭಂಡಾರಿ ಅವರಿಗೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50,000 ರೂ. ಮೊತ್ತದ ಚೆಕ್ ಅನ್ನು ಶಾಸಕರು ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ರವಿ ಶೆಟ್ಟಿ ಚಿತ್ತೂರು, ಶ್ರೀಧರ್ ಬಿಜೂರು, ನಾಗರಾಜ್ ನಾರ್ಕಳಿ, ರಾಜೀವ್ ಶೆಟ್ಟಿ ಬಿಜ್ರಿ ಉಪಸ್ಥಿತರಿದ್ದರು.
Discussion about this post