ದಿವಂಗತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 68ನೆಯ ಜನ್ಮದಿನವನ್ನು ಇತ್ತೀಚೆಗೆ ಅವರ ಅಭಿಮಾನಿಗಳು ಅವರ ಸ್ಮರಣಾರ್ಥವಾಗಿ ಆಚರಿಸಿದರು.
ಇಂತಹ ಸಂದರ್ಭದಲ್ಲಿ ಎಸ್‍ಆರ್‍ವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರ್ತಿ ಇನ್ನೋವೇಷನ್ಸ್ ವತಿಯಿಂದ ಆರು ಕಿರುಚಿತ್ರಗಳನ್ನು ಪ್ರಸ್ತುತಪಡಿಸಿದ್ದು, ಇದಕ್ಕೆ ದೊರೆತ ಪ್ರತಿಕ್ರಿಯೆ ಮಾತ್ರ ಅದ್ಬುತ.
ವಿಷ್ಣು ಅಳಿಯ ಅನಿರುದ್ಧ ಅವರು ಇದರ ಪರಿಕಲ್ಪನೆ, ಬರವಣಿಗೆ ಹಾಗೂ ನಿರ್ದೇಶನ ಸಹ ನಿಭಾಯಿಸಿದ್ದಾರೆ.
ಈ ಕಿರುಚಿತ್ರಗಳ ವೈಶಿಷ್ಟ್ಯವೆಂದರೆ, ಸಂಭಾಷಣೆಯೇ ಇಲ್ಲದೆ ಸಾಮಾಜಿಕ ಸಂದೇಶವನ್ನು ಸಾರುವ ಕಿರುಚಿತ್ರಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲ್ಲೂ ತಯಾರಿಸಲಾಗಿವೆ.
ಕಿರುಚಿತ್ರಗಳು ವಿವಿಧ ಚಿತ್ರ ಪ್ರಕಾರಗಳಾದ ಭಯಾನಕ/ಹಾರರ್, ರೋಮಾಂಚಕ/ಥ್ರಿಲ್ಲರ್ ಹಾಗೂ ಹಾಸ್ಯ, ಇತ್ಯಾದಿಯಾದ ಪ್ರಕಾರಗಳಲ್ಲಿ ಇವೆ.
ಕಿರುಚಿತ್ರಗಳ ಶೀರ್ಷಿಕೆಗಳು ಹೇಗಿವೆ ನೋಡಿ:
ಕ್ಯಾಂಡಲ್ ಲೈಟ್ (ಅವಧಿ: 5 ನಿಮಿಷ 30 ಸೆಕೆಂಡುಗಳು, ಶೈಲಿ: ಭಯಾನಕ/ಹಾರರ್)
ಉಳಿಸಿ (ಅವಧಿ: 1 ನಿಮಿಷ 52 ಸೆಕೆಂಡುಗಳು, ಪ್ಶೈಲಿ: ಹಾಸ್ಯ)
ಶಾಂತಂ ಪಾಪಂ (ಅವಧಿ: 1 ನಿಮಿಷ, ಪ್ಶೈಲಿ: ಅಪರಾಧದ ಕಥೆ/ಕ್ರೈಮï)
ಧೂಮ (ಅವಧಿ: 3 ನಿಮಿಷ 13 ಸೆಕೆಂಡುಗಳು, ಶೈಲಿ: ರೋಮಾಂಚಕ/ಥ್ರಿಲ್ಲರ್)
ನೀರು (ಅವಧಿ: 3 ನಿಮಿಷ 23 ಸೆಕೆಂಡುಗಳು, ಶೈಲಿ: ನಾಟ್ಯಾ)
ವೈಷ್ಣವ ಜನತೋ (ಅವಧಿ: 3 ನಿಮಿಷ 15 ಸೆಕೆಂಡುಗಳು, ಪ್ಶೈಲಿ: ರಾಜಕೀಯ ವಿಡಂಬನೆ)
2014 ರಲ್ಲಿ ವಿಭಾ ಚಾರಿಟೆಬಲ್ ಟ್ರಸ್ಟ್ ನಡೆಸಿದ ಚಿತ್ರ ನಿರ್ಮಾಣದ ಶಿಬಿರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಈ ಚಿತ್ರತಂಡದಲ್ಲಿರುವುದು ವಿಶೇಷವೇ ಸರಿ.
ಶ್ರವ್ಯ ಸುಳಿ ಎಂಬ ಶೀರ್ಷಿಕೆಯ, ವಿದ್ಯಾರ್ಥಿಗಳೇ ಸ್ವತಂತ್ರವಾಗಿ ತಯಾರಿಸಿದ ಚಿತ್ರವನ್ನೂ ಸಹ ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.
ಈ ಕುರಿತಂತೆ ಮಾತನಾಡಿರುವ ಹಿರಿಯ ನಟಿ, ವಿಭಾ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಹಾಗೂ ಕೀರ್ತಿ ಇನ್ನೋವೇಶನ್ಸ್ ಮಾರ್ಗದರ್ಶಕಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಚಿತ್ರ ನಿರ್ಮಾಣ ಶಿಬಿರದ ವಿದ್ಯಾರ್ಥಿಗಳನ್ನು ಕಿರುಚಿತ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಉತ್ತೇಜಿಸುವ ಸಲುವಾಗಿ ನಾವು ಕಿರುಚಿತ್ರಗಳ ನಿರ್ಮಾಣದ ಯತ್ನವನ್ನು ಮಾಡಿದೆವು ಎಂದಿದ್ದಾರೆ.
ತಮ್ಮ ಶಿಬಿರದಲ್ಲಿ ಕಲಿತಿದ್ದನ್ನು ಕಾರ್ಯರೂಪಕ್ಕೆ ತಂದಾಗ, ಅವರಿಗೆ ಚಿತ್ರನಿರ್ಮಾಣದ ಒಳಸುಳಿವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಯಿತು ಎನ್ನುತ್ತಾರೆ ಹಿರಿಯ ನಟಿ.
Discussion about this post