ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ವಕ್ಪ್ #Wakf ಕಾಯ್ದೆ ತಿದ್ದುಪಡಿಗೆ ಸಂವಿಧಾನ ಬದ್ದವಾಗಿ ಸಂಸತ್ತಿನ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಸಮಿತಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಪ್ ಸಂಸದೀಯ ಮಂಡಳಿ ಕರ್ನಾಟಕಕ್ಕೆ ಬೇಟಿರುವುದಕ್ಕೆ
ಅದೊಂದು ಯಾವುದೇ ಆಧಾದರಹಿತವಾದ ಸಮಿತಿ ಎಂದು ಕಾಂಗ್ರೆಸ್ ನವರು ಮಾಡಿರುವ ಆರೋಪಕ್ಕೆ ಅವರು ಉತ್ತರ ಕೊಟ್ಟರು.
ಇದೊಂದು ಪಾರ್ಲಿಮೆಂಟ್ ಮಾಡಿದ ಸಮಿತಿ ಉಭಯ ಸದನಗಳಿಂದ ರಚನೆಯಾದ ಸಮಿತಿ, ಪಾರ್ಲಿಮೆಂಟ್ ಜಂಟಿ ಸದನ ಮಾಡಿದ ಸಮಿತಿಗೆ ತನ್ನದೇ ಆದ ಗೌರವ ಇದೆ. ಕರ್ನಾಟಕದಲ್ಲಿ ಸಮಸ್ಯೆ ಇದೆ ಅಂತ ಅವರು ಇಲ್ಲಿಗೆ ಬಂದಿದ್ದರು. ಯಾವುದೇ ರೀತಿಯ ರಾಜಕೀಯ ಇಲ್ಲ. ಸಮಿತಿಯವರು ರೈತರ ಸಮಸ್ಯೆ ಆಲಿಸಿದ್ದಾರೆ.
ಈ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಓಲೈಕೆ ರಾಜಕಾರಣ ಮಾಡಲು ಆರೋಪ ಮಾಡುತ್ತಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಸಂಸತ್ತಿನ ಬಗ್ಗೆಯೂ ಗೌರವ ಇಲ್ಲ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post