ಆರ್ಟಿಕಲ್ 1: ಅಂಟಾರ್ಟಿಕಾ ಪ್ರದೇಶವನ್ನು ಶಾಂತಿಯುತ ಕಾರ್ಯಗಳಿಗೆ ಮಾತ್ರ ಬಳಸಬೇಕು. ಯಾವುದೆ ರೀತಿಯ ಮಿಲಿಟರಿ ಚಟುವಟಿಕೆಗಳು ಮತ್ತು ಆಯುಧಗಳ ಪರೀಕ್ಷೆಯನ್ನು ನಿಷೇಧಿಸಿದೆ. ಆದರೆ ವೈಜ್ಞಾನಿಕ ಸಂಶೋಧನೆಗಳು ಮತ್ತು ಇನ್ನಿತರೇ ಶಾಂತಿಯುತ ಕಾರ್ಯಗಳಿಗೆ ಮಿಲಿಟರಿಯನ್ನು ಉಪಯೋಗಿಸಬಹುದು.
ಆರ್ಟಿಕಲ್ 2: ಒಪ್ಪಂದದಡಿಯಲ್ಲಿ ಬರುವ ದೇಶಗಳು ಸಂಶೋಧನೆಗಳನ್ನು ಕೈಗೊಳ್ಳಲು ಯಾರೂ ಅಡ್ಡಿಪಡಿಸುವಂತಿಲ್ಲ ಮತ್ತು ಪರಸ್ಪರ ಸಹಕಾರ ನೀಡುವಿಕೆ ಎಂದಿನಂತೆಯೆ ಮುಂದುವರೆಸಬೇಕು.
ಆರ್ಟಿಕಲ್ 3: ವಿಶ್ವಸಂಸ್ಥೆ ಮತ್ತು ಇತರೆ ಅಂತರ್ರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ತಮ್ಮಲ್ಲಿರುವ ಯಾವುದೇ ರೀತಿಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು.
ಆರ್ಟಿಕಲ್ 4: ಈ ಟ್ರೀಟಿಯು ಜಾರಿಯಲ್ಲಿರುವಾಗ ಯಾವುದೇ ದೇಶ ಅಥವಾ ಸಂಸ್ಥೆ ಅಂಟಾರ್ಟಿಕಾದ ಯಾವುದೇ ಭೂ ಭಾಗದ ಮೇಲೆ ಹಕ್ಕು ಸಾಧಿಸುವಂತಿಲ್ಲ.
ಆರ್ಟಿಕಲ್ 5: ಅಣುಸ್ಫೋಟ ಮತ್ತು ವಿಕಿರಣಯುಕ್ತ (Radioactive waste) ತ್ಯಾಜ್ಯವನ್ನು ವಿಲೇವಾರಿ ಮಾಡುವಂತಿಲ್ಲ.
ಆರ್ಟಿಕಲ್ 6: ಈ ಟ್ರೀಟಿಯ ವ್ಯಾಪ್ತಿಯಲ್ಲಿ ಅಂಟಾರ್ಟಿಕಾ ಎಂದು ಕರೆಯಲ್ಪಡುವ ಪ್ರದೇಶವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. 600 ಅಕ್ಷಾಂಶದಿಂದ ದಕ್ಷಿಣಕ್ಕೆ ಇರುವ ಭೂ ಭಾಗ ಮತ್ತು ಹಿಮಪರ್ವತ ಪ್ರದೇಶವನ್ನು ಅಂಟಾರ್ಟಿಕಾ ಎಂದು ಹೇಳಬಹುದು. ಆದರೆ ಈ ವ್ಯಾಪ್ತಿಗೆ ಅಂಟಾರ್ಟಿಕಾ ಸುತ್ತಮುತ್ತಲಿನ ಸಾಗರವು ಇರುವುದಿಲ್ಲ.
ಆರ್ಟಿಕಲ್ 7: ಟ್ರೀಟಿಯ ಅಡಿಯಲ್ಲಿ ಬರುವ ರಾಷ್ಟ್ರಗಳು ಅಂಟಾರ್ಟಿಕಾದ ಯಾವುದೇ ಭಾಗಕ್ಕೆ ಯಾರದೇ ಅಡ್ಡಿ ಆತಂಕಗಳಿಲ್ಲದೆ ಭೇಟಿ ನೀಡಬಹುದು. ಕೇವಲ ಭೂಭಾಗ ಮಾತ್ರವಲ್ಲದೆ ವೈಮಾನಿಕವಾದ ಯಾವುದೇ ಭೇಟಿ ನೀಡುವ ಮೊದಲೇ ಅವರ ವಿವರ ಮತ್ತು ಭೇಟಿಯ ಉದ್ದೇಶವನ್ನು ತಿಳಿಸುವುದು.
ಆರ್ಟಿಕಲ್ 8: ಯಾವುದೇ ದೇಶದ ವಿಜ್ಞಾನಿಗಳು ಮತ್ತು ಅವರು ಕೈಗೊಳ್ಳುವ ಕಾರ್ಯಗಳ ಆಯಾ ದೇಶದ ಕಾನೂನು ವ್ಯಾಪ್ತಿಗೊಳಪಡುತ್ತದೆ.
ಆರ್ಟಿಕಲ್ 9: ಆಗಿಂದಾಗ್ಗೆ ಸದಸ್ಯ ರಾಷ್ಟ್ರಗಳ ತಂಡಗಳು ಸಭೆ ಸೇರಿ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುವುದು.
ಆರ್ಟಿಕಲ್ 10: ಎಲ್ಲಾ ದೇಶಗಳು ಈ ಟ್ರೀಟಿಯ ನಿಬಂಧನೆಗೊಳಪಡುವುದು ಮತ್ತು ಯಾವುದೇ ರೀತಿಯ ಉಲ್ಲಂಘನೆ ಮಾಡದಿರುವುದು.
(ಮುಂದುವರೆಯುವುದು)
Discussion about this post