ಶ್ರೀರಾಮಪರ(ಪಶ್ಚಿಮಬಂಗಾಳ): ದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಬಂದರೆ ತೃಣಮೂಲ ಕಾಂಗ್ರೆಸ್ ಸ್ಥಿತಿ ಮರುಭೂಮಿಯಂತಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್’ನ 40 ಶಾಸಕರನ್ನು ನನ್ನ ಸಂಪರ್ಕದಲ್ಲಿದ್ದಾರೆ. ದೀದಿ ಎಂದಿಗೂ ದೆಹಲಿಗೆ ತಲುಪಲು ಸಾಧ್ಯವಿಲ್ಲ, ದೆಹಲಿ ಬಹಳ ದೂರವಿದೆ. ಕೇವಲ ಕ್ಷಮೆಯಾಗಿ ದೆಹಲಿಗೆ ಹೋಗುತ್ತಾರೆ ಎಂದು ಕಟಕಿಯಾಡಿದ್ದಾರೆ.
ದೀದೀ ಅವರ ಸಂಬಂಧಿಯನ್ನು ರಾಜಕೀಯವಾಗಿ ಸ್ಥಾಪಿಸುವುದು ಅವರ ಪ್ರಮುಖವಾದ ಹಿತಾಸಕ್ತಿಯಾಗಿದೆ ಎಂದ ಅವರು, ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಡೈಮಂಡ್ ಹಾರ್ಬರೂ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಟಿಎಂಸಿಯ ಅಭ್ಯರ್ಥಿಯಾಗಿದ್ದಾರೆ ಎಂದರು.
Discussion about this post