ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ನನ್ನ ಸಹೋದರಿ ಪ್ರಿಯಾಂಕಾ ವಾದ್ರಾ #Priyanka Wadra ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು 2-3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಸಂಸದ ರಾಹುಲ್ ಗಾಂಧಿ ಕಟಿಕಿಯಾಡಿದ್ದಾರೆ.
ರಾಯ್’ಬರೇಲಿ ನಡೆದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೂ, ಅವರನ್ನು ಜನರು ರಾಜಕೀಯವಾಗಿ ತಿರಸ್ಕರಿಸಿದ್ದಾರೆ ಎಂದಿದ್ದಾರೆ.
Also read: ಜೂನ್ 24 – ಜುಲೈ 3 | 19ನೇ ಲೋಕಸಭೆಯ ಮೊದಲ ಅಧಿವೇಶನ
ಒಂದು ವೇಳೆ ಪ್ರಿಯಾಂಕಾ ಅವರು ವಾರಣಾಸಿಯಿಂದ ಸ್ಫಧಿಸಿದ್ಧೇ ಆಗಿದ್ದಲ್ಲಿ ನರೇಂದ್ರ ಮೋದಿ ನಿಶ್ಚಿತವಾಗಿ ಸೋಲುತ್ತಿದ್ದರು ಎಂದಿದ್ದಾರೆ.
ಹಿಂಸಾಚಾರ ಮತ್ತು ದ್ವೇಷದ ರಾಜಕಾರಣದಲ್ಲಿ ಬಹಿರಂಗವಾಗಿ ತೊಡಗಿರುವ ಪ್ರಧಾನಿಗೆ ಉತ್ತರ ಪ್ರದೇಶದ ಜನರು ಉತ್ತರ ನೀಡಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post