ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರಿನ ಕದ್ರಿ ಪಾರ್ಕ್, #Mangalore Kadri Park ಸ್ಮಾರ್ಟ್ ಸಿಟಿ ಯೋಜನೆಯಲ್ಲಿ #Smartcity Project ಅಭಿವೃದ್ಧಿಗೊಂಡು ಕಂಗೊಳಿಸುತ್ತಿದೆ. ಆದರೆ ಪಾರ್ಕ್‌ನ ರಸ್ತೆಗೆ ಟೋಲ್ ಸಿಸ್ಟಮ್ #Toll System ರೀತಿಯ ಪಾರ್ಕಿಂಗ್ ಶುಲ್ಕಕ್ಕೆ ಸ್ಮಾರ್ಟ್ ಸಿಟಿ ನಿರ್ಧರಿಸಿದ್ದು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕದ್ರಿ ಪಾರ್ಕ್, ಕಡಲ ತಡಿ ಮಂಗಳೂರಿನ ಯುವಕ ಯುವತಿಯರ ಫೇವರೆಟ್ ಸ್ಪಾಟ್. ವಾಯು ವಿಹಾರಿಗಳ ನೆಚ್ಚಿನ ತಾಟ, ಪ್ರತಿನಿತ್ಯ ಸಾವಿರಾರು ಮಂದಿ, ಕದ್ರಿ ಪಾರ್ಕ್ಗೆ ಬರುತ್ತಾರೆ. ಆದ್ರೆ ಜನವರಿಯಿಂದ ಕದ್ರಿ ಪಾರ್ಕ್ಗೆ ಬರುವವರಿಗೆ ಟೋಲ್ ರೀತಿಯಲ್ಲೇ ಹಣ ಕಟ್ ಆಗುವ ಬಿಸಿ ತಟ್ಟಲಿದೆ.

ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆ ಟೆಂಡರ್ ಮೂಲಕ ಪಡೆದುಕೊಂಡಿದೆ. ಇದೇ ಸಂಸ್ಥೆ ಕದ್ರಿ ಪಾರ್ಕ್ ಅಂಗಡಿ, ರಸ್ತೆ, ಫುಟ್‌ಪಾತ್, ಪಾರ್ಕಿಂಗ್ ಜಾಗವನ್ನು ನಿರ್ವಹಣೆ ಮಾಡಲಿದೆ. ಆದರೆ ಟೆಂಡರ್ ಪಡೆದ ಸಂಸ್ಥೆಗೆ ಇದರಿಂದ ನಿರೀಕ್ಷಿತ ಪ್ರಮಾಣದ ಆದಾಯ ಸಿಗುತ್ತಿಲ್ಲ. ಹೀಗಾಗಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್‌ಗೇಟ್ ರೀತಿಯಲ್ಲೇ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ.
ಇನ್ನೂ, ಟೋಲ್ ರೀತಿಯ ಹಣ ಸಂಗ್ರಹಕ್ಕೆ ಮುಂದಾಗಲಿರುವ ಸ್ಮಾರ್ಟ್ ಸಿಟಿ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಟೋಲ್ ಬೇಡ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Discussion about this post