ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಐದು ವರ್ಷಗಳ ಕಾಲ ಕೇಂದ್ರದಿಂದ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಮತ್ತೊಂದು ಶಾಕ್ ನೀಡಿದೆ.
ಹೌದು… ಈ ಸಂಘಟನೆಯನ್ನು ನಿನ್ನೆ ನಿಷೇಧಗೊಳಿಸಿದ ಬೆನ್ನಲ್ಲೇ ಇದಕ್ಕೆ ಸೇರಿದ ಫೇಸ್’ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬ್ಲಾಕ್ ಮಾಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹರಡುವುದು ಹಾಗೂ ಆ ಮೂಲಕ ಸಮಾಜ ಶಾಂತಿ ಕದಡುವ ಯತ್ನದ ಹಿನ್ನೆಲೆಯಲ್ಲಿ ಮತ್ತು ಸಂಘಟನೆಯೇ ನಿಷೇಧಗೊಂಡಿರುವ ಕಾರಣ ಇದರ ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬ್ಲಾಕ್ ಮಾಡಿ, ತನಿಖೆ ನಡೆಸಲಾಗುತ್ತಿದೆ.
Also read: ಕೋಟಿಗಟ್ಟಲೆ ಹಣವಿರುವ ಪಿಎಫ್’ಐ ಬ್ಯಾಂಕ್ ಖಾತೆಗಳು ಸೀಜ್?
ಇದೇ ವೇಳೆ, ವಿದೇಶಗಳಿಂದ ಅಕ್ರಮವಾಗಿ ಹಣವನ್ನು ದೇಣಿಗೆಯಾಗಿ ಪಡೆದು, ದೇಶದ್ರೋಹಿ ಚಟುವಟಿಕೆ ನಡೆಸುವ ಆರ್ಥಿಕ ಭಯೋತ್ಪಾದಕರ ವಿರುದ್ಧವೂ ಸಹ ತನಿಖೆ ನಡೆಸಲು ಕೇಂದ್ರ ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post