ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಭದ್ರಾವತಿ ನಡುವೆ ಅತಿಯಾದ ವಾಹನ ದಟ್ಟಣೆ ತಗ್ಗಿಸಲು ಮೋನೋ ರೈಲುಗಳ #MonoRail ಸಂಚಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ #BYRaghavendra ಭರವಸೆ ನೀಡಿದ್ದಾರೆ.
ಕೇಂದ್ರ ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘದ ವತಿಯಿಂದ ದೂರವಾಣಿ ಬಡಾವಣೆಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
Also read: ಕಟ್ಟಡ ಸೋರುವ ಕುರಿತು ಸಚಿವ ಮಧು ಹೇಳಿಕೆ | ಆಯನೂರು ಮಂಜುನಾಥ್ ಸ್ಪಷ್ಟನೆಯೇನು?
ಶಿವಮೊಗ್ಗ-ಭದ್ರಾವತಿ #Bhadravathi ನಡುವೆ ಅತಿಯಾದ ವಾಹನ ದಟ್ಟಣೆ ತಗ್ಗಿಸಲು ಮೊನೋ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗುವುದು. ನಿವೃತ್ತ ನೌಕರರ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಶೀಘ್ರವೇ ಅನುಮೋದನೆ ದೊರೆಯಲಿದೆ. ಇದರೊಂದಿಗೆ ಶೀಘ್ರವೇ ಕಟ್ಟಡದ ಬಗ್ಗೆಯೂ ಬಗ್ಗೆಯೂ ಭರವಸೆ ನೀಡಿದರು.
ನನ್ನ ಅಪಾರ ಸಾಧನೆಗೆ ಹಿರಿಯರಾದ ನೀವುಗಳೇ ಪ್ರೇರಣೆಯಾಗಿದ್ದು, ನಿಮ್ಮಗಳ ಮಾರ್ಗದರ್ಶನ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ ಎಂದರು.
ಬೆಂಗಳೂರು ವಿನಯ್ ಕುಮಾರ್ ಸಿನ್ಹಾ ಟೆಲಿಕಾಂ ಜಿಎಂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಂಚೆ ಇಲಾಖೆ ಮೂಲಕ ಶಶಿಧರ್, ನಾಗರಾಜ ರಾವ್, ಕೆ.ಜಿ. ಕೃಷ್ಣಮೂರ್ತಿ, ಎ.ಎನ್. ಐತಾಳ , ಪರಮೇಶ್ವರಪ್ಪ ಎಸ್.ಪಿ, ಗುರುಮೂರ್ತಿ ಅವರುಗಳು ನೂತನ ಸಂಸದರಿಗೆ ಸನ್ಮಾನಿಸಿದರು.
ಆದಾಯ ತೆರಿಗೆ ಇಲಾಖೆಯ ವಾಸುದೇವ್ ಇತರರು ಹಾಗೂ ದೂರವಾಣಿ ಇಲಾಖೆ, ಪ್ಯಾರಾ ಮಿಲಿಟರಿ, ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ನೂರಾರು ನಿವೃತ್ತರು ಆಗಮಿಸಿದ್ದರು.
ರಾಜ್ಯ ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಚ್.ಆರ್. ಜಯಪ್ಪ ಸ್ವಾಗತಿಸಿ, ಶೇಷಗಿರಿ ನಿಯೋಜಿಸಿದರು. ಸುಬ್ರಹ್ಮಣ್ಯ ಪ್ರಾರ್ಥಿಸಿ, ದತ್ತಾತ್ರಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post