ಕಲ್ಪ ಮೀಡಿಯಾ ಹೌಸ್
ಪುತ್ತೂರು: ನಗರದ ಸಂಘ ಪರಿವಾರದ ಸೇವಾಭಾರತಿ ವಿಭಾಗದವರಿಂದ ಸಂಕಷ್ಟದಲ್ಲಿರುವವರಿಗೆ ಸಾಮಾಜಿಕ ಕಳಕಳಿಯ ಕಾರ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ಪೆರ್ಲಂಪಾಡಿ ನಿವಾಸಿಯೊಬ್ಬರು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಶಾಸಕರ ವಾರ್ ರೂಂ ನೇತೃತ್ವದಲ್ಲಿ ಮಡಿವಾಳಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲು ನೆರವು ನೀಡಲಾಯಿತು.
ಘಟನೆಯ ವಿವರ:
ಬೆಂಗಳೂರಿನಲ್ಲಿ ಮೃತರಾದ ಪುತ್ತೂರು ಪೆರ್ಲಂಪಾಡಿ ನಿವಾಸಿಯ ಶವಸಂಸ್ಕಾರವನ್ನು ನಗರದ ಶಾಸಕರ ವಾರ್ ರೂಂ ನೇತೃತ್ವದಲ್ಲಿ ಮಡಿವಾಳಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಆದರೆ, ಸಂಜೆ ೬ಗಂಟೆಯೊಳಗಾಗಿ ಬೆಂಗಳೂರಿನಿಂದ ಬರಬೇಕಿದ್ದ ಅಂಬುಲೆನ್ಸ್ ನಾನಾ ಕಾರಣಗಳಿಂದಾಗಿ ಪುತ್ತೂರು ತಲುಪುವಾಗ ರಾತ್ರಿ 10 ಗಂಟೆಯಾಗಿತ್ತು. ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಅವರ ಸಹಕಾರದೊಂದಿಗೆ ಸ್ಮಶಾನದ ಮೇಲ್ವಿಚಾರಕ ಸತೀಶರವರು ತಾಳ್ಮೆಯಿಂದ ಕಾದು ಶವ ಸಂಸ್ಕಾರ ನೆರವೇರಿಸಿದರು.
ನಂತರ ಎಲ್ಲಾ ಮುಗಿದು ಹೊರಡುವ ವೇಳೆಗೆ ಬೆಂಗಳೂರಿನಿಂದ ಬಂದ ಅಂಬುಲೆನ್ಸ್ ಚಾಲಕ ಅಣ್ಣಾ ಎಲ್ಲಾದ್ರೂ ಊಟ ಸಿಗತ್ತಾ ಅಂತ ಕೇಳಿದಾಗ, ತಕ್ಷಣ ಪುತ್ತೂರಿನ ಸಂಘ ಪರಿವಾರದ ಸೇವಾಭಾರತಿ ವಿಭಾಗದ ಲಕ್ಷ್ಮೀಪ್ರಸಾದರಿಗೆ ಕರೆಮಾಡಲಾಯಿತು. 10:30ಕ್ಕೆ ಲಕ್ಷ್ಮೀಪ್ರಸಾದರು ಕೃಷ್ಣಣ್ಣನೊಂದಿಗೆ ಊಟ ಸಹಿತ ಸ್ಥಳಕ್ಕೆ ಆಗಮಿಸಿ ಅಂಬುಲೆನ್ಸ್ ಚಾಲಕನೊಂದಿಗೆ ಮಧ್ಯಾಹ್ನದಿಂದ ಹಸಿದಿದ್ದ 5-6 ಮಂದಿ ಮೃತರ ಸಂಬಂಧಿಕರಿಗೂ ಉಣಬಡಿಸಲಾಯಿತು.
ಊಟ ಮುಗಿಸಿ ಹೊರಟ ಅಂಬುಲೆನ್ಸ್ ಚಾಲಕ ಹಾಗೂ ಮೃತರ ಸಂಬಂಧಿಕರು ದೇವರು ನಿಮ್ಮನ್ನೆಲ್ಲಾ ಚೆನ್ನಾಗಿಟಿರಲಿ ಎಂದು ಹಾರೈಸಿದಾಗ ಸಂಘದ ಹಾಡು ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯವಾ ನೆನಪಿಸಿಕೊಂಡೆವು.
ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post