ಬೆಂಗಳೂರು: ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ನಿಧನ ದುಃಖ ಉಂಟು ಮಾಡಿದೆ. ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಅವರ ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಚಿತ್ರರಂಗ, ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ. ಲೋಕನಾಥ್ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ನಿಧನ ದುಃಖ ಉಂಟು ಮಾಡಿದೆ.ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಅವರ ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಚಿತ್ರರಂಗ , ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ.ಲೋಕನಾಥ್ ಆತ್ಮಕ್ಕೆ ಶಾಂತಿ ಸಿಗಲಿ,ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ pic.twitter.com/NAnCZ7j1an
— CM of Karnataka (@CMofKarnataka) December 31, 2018
ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, 35 ವರ್ಷದಿಂದ ವೈಯಕ್ತಿಕವಾಗಿ ಬಲ್ಲೆ ಈ ಶಿಸ್ತಿನ ಕಲಾಬಂಧುವನ್ನ! ಅಂಬರೀಶ ರವರ ಸ್ಮರಣಾರ್ಥ ಸಂದರ್ಭದಲ್ಲಿ ನನ್ನಪಕ್ಕಕೂತು ಆತ್ಮೀಯವಾಗಿ ಮಾತಾಡಿಸಿದ್ದರು! ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ! ಅವರಲ್ಲಿ ತಂದೆ ತಾತ ಬಂಧು ಕಾಣುತ್ತಿದ್ದೆ! ಅಲ್ಲಿತ್ತು ಅವರಮನೆ ಬಂದಿದ್ದರು ಸುಮ್ಮನೆ! ಹೋದರು ಮತ್ತೆ ಅವರ ಮನೆಗೆ ಎಂದಿದ್ದಾರೆ.
35ವರ್ಷದಿಂದ ವೈಯಕ್ತಿಕವಾಗಿ ಬಲ್ಲೆ ಈ ಶಿಸ್ತಿನ ಕಲಾಬಂಧುವನ್ನ!
ಅಂಬರೀಶ ರವರ ಸ್ಮರಣಾರ್ಥ ಸಂದರ್ಭದಲ್ಲಿ ನನ್ನಪಕ್ಕಕೂತು ಆತ್ಮೀಯ ವಾಗಿ ಮಾತಾಡಿಸಿದ್ದರು!ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ!ಅವರಲ್ಲಿ ತಂದೆ ತಾತ ಬಂಧು ಕಾಣುತ್ತಿದ್ದೆ!ಅಲ್ಲಿತ್ತು ಅವರಮನೆ ಬಂದಿದ್ದರು ಸುಮ್ಮನೆ!ಹೋದರು ಮತ್ತೆ ಅವರ ಮನೆಗೆ!ಓಂಶಾಂತಿ. pic.twitter.com/2b3Gz9iKD5— ನವರಸನಾಯಕ ಜಗ್ಗೇಶ್ (@Jaggesh2) December 31, 2018
ಪುನೀತ್ ರಾಜಕುಮಾರ್ ತಮ್ಮ ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದು, ಬಂಗಾರದ ಮನುಷ್ಯ, ಬಂಗಾರದ ಪಂಜರ ಚಿತ್ರಗಳನ್ನು ಲೋಕನಾಥ್ ಅವರ ಅಭಿನಯವನ್ನು ಯಾರೂ ಮರೆಯುವಂತಿಲ್ಲ. ಇಂತಹ ಹಿರಿಯ ನಟರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ಯಶ್ ಅಧಿಕೃತ ಎಫ್‌ಸಿಯಲ್ಲಿ ಟ್ವೀಟ್ ಮಾಡಿದ್ದು, ಕನ್ನಡ ಚಿತ್ರರಂಗ ಕಂಡ ಮೇರು ನಟರಾದ ಲೋಕನಾಥ್, ಉಪ್ಪಿನ ಕಾಯಿ ಲೋಕನಾಥ್, ನಾಗರಹಾವು ಪ್ರಿನ್ಸಿಪಾಲ್ ಇನ್ನಿಲ್ಲ…!! ಕನ್ನಡ ಚಿತ್ರರಂಗದ ಪ್ರಮುಖ ಬೇರೊಂದು ಕಳಚಿಕೊಂಡ ದಿನ ಎಂದು ದುಃಖಿಸಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಮೇರು ನಟರಾದ ಲೋಕನಾಥ್, ಉಪ್ಪಿನ ಕಾಯಿ ಲೋಕನಾಥ್, ನಾಗರಹಾವು ಪ್ರಿನ್ಸಿಪಾಲ್ ಇನ್ನಿಲ್ಲ…!!
ಕನ್ನಡ ಚಿತ್ರರಂಗದ ಪ್ರಮುಖ ಬೇರೊಂದು ಕಳಚಿಕೊಂಡ ದಿನ.#RIPLokanathSir pic.twitter.com/A1OXJuaGy1
— Yash Official FC (@YashFC) December 31, 2018
ನಟ ದರ್ಶನ್ ಟ್ವೀಟ್ ಮಾಡಿದ್ದು, ಕನ್ನಡ ಚಿತ್ರರಂಗಕ್ಕಾಗಿ 5 ದಶಕಗಳಿಂದ ದುಡಿದ ಹಿರಿಯ ನಟರಾದ ಉಪ್ಪಿನಕಾಯಿ ಲೋಕನಾಥ್ ಅಂಕಲ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರೊಡನೆ ನನಗೂ ಸಹ ಕೆಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕಾಗಿ ೫ ದಶಕಗಳಿಂದ ದುಡಿದ ಹಿರಿಯ ನಟರಾದ ಉಪ್ಪಿನಕಾಯಿ ಲೋಕನಾಥ್ ಅಂಕಲ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರೊಡನೆ ನನಗೂ ಸಹ ಕೆಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ
— Darshan Thoogudeepa (@dasadarshan) December 31, 2018
ಶಿಸ್ತು ಹಾಗೂ ಬದ್ದತೆಯನ್ನು ತಮ್ಮ ಉಸಿರನ್ನಾಗಿಸಿಕೊಂಡು, ಸರಳವಾಗಿಯೇ ಜೀವನ ನಡೆಸಿದ ಲೋಕನಾಥ್ ಅವರ ನಿಧನ ಆಘಾತವನ್ನು ಉಂಟು ಮಾಡಿದೆ ಎಂದು ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
A very down to earth humble human I have known. Lived life with great discipline n ethics. A very versatile actor industry has witnessed for decades,,entertaining us from the B&W era, until now.
My prayers for his soul to rest in peace. 🙏🙏@ https://t.co/tt1i1FOuHh— Kichcha Sudeepa (@KicchaSudeep) December 31, 2018
Discussion about this post