ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರು ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ನಿವೇದನಾ ಸಮಾಜಸೇವಾ ಇಂಟರ್ನಷಿಪ್ ತರಬೇತಿ ಅಂಗವಾಗಿ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ಕುಟುಂಬಗಳ ಪುಟಾಣಿ ಮಕ್ಕಳಿಗೆ ಮರದ ನೆರಳಿನ ಬಯಲು ಶಾಲೆಯಲ್ಲಿ ಆಟ-ಪಾಠ ಹಮ್ಮಿಕೊಂಡಿದ್ದರು.
ಸುಮಾರು 40 ಮಕ್ಕಳು ಇದ್ದ ಈ ತರಗತಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ಪ್ರಾಣಿ-ಪಕ್ಷಿಗಳು, ನದಿ-ತೊರೆಗಳು, ಬೆಟ್ಟ-ಗುಡ್ಡಗಳು, ಪರಿಸರ ಸಂರಕ್ಷಣೆ, ಕೊವಿಡ್-19 ಬಗ್ಗೆ ಮುನ್ನೆಚ್ಚರಿಕೆ, ಪುರಾತನ ಆಟಗಳ ಬಗ್ಗೆ ಮಾಹಿತಿ ನೀಡಲಾಯಿತು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ನಿವೇದಿತಾ ಪ್ರತಿಷ್ಠಾನದ ಹಿರಿಯ ಕಾರ್ಯಕರ್ತೆ ಭಾಗೀರತಿಬಾಯಿ, ಸ್ವಯಂಸೇವಕಿಯರಾದ ಕು.ನಾಗವೇಣಿ, ಲತಾ, ಸುಜ್ಞಾ, ಆಶಾ, ಚಂದನಾ, ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post