ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಹಿಂದೂಗಳ ಭಾವನೆಗೆ ಬೆಲೆಕೊಟ್ಟ ಹೈಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಎಸ್. ದತ್ತಾತ್ರಿ ಹೇಳಿದ್ದಾರೆ
ದತ್ತ ಪೀಠದ ಮೇಲೆ ನಂಬಿಕೆ ಇರಿಸಿರುವ ಅಸಂಖ್ಯಾತ ಭಕ್ತರಿಗೆ ಶುಭ ವಿಚಾರ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಭೂಮಿ ಚಂದ್ರದ್ರೋಣ ಪರ್ವತದ ಶ್ರೀ ಗುರು ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ನೇಮಕ ಆದೇಶ ರದ್ದು ಮಾಡಿ ಹೈಕೋರ್ಟ್ ನೀಡಿರುವ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ.
ದತ್ತಪೀಠದ ಪೂಜಾ ಕೈಂಕರ್ಯ ಗೊಂದಲಕ್ಕೆ ತೆರೆ ಬಿದ್ದಿದ್ದು. ಪೀಠದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾ.19 ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಸರಕಾರದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಸರಕಾರದ ಆದೇಶವನ್ನು ರದ್ದುಪಡಿಸುವ ಮೂಲಕ ದತ್ತ ಭಕ್ತರ ನಂಬಿಕೆ, ಧಾರ್ಮಿಕ ಭಾವನೆಗಳಿಗೆ ಮನ್ನಣೆ ಗೌರವ ಸಂದಿದೆ. ಹಿಂದೂಗಳ ಭಾವನೆಗೆ ಬೆಲೆಕೊಟ್ಟ ಹೈಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ದಶಕಗಳ ಕಾಲ ದತ್ತ ಸಂವರ್ಧನಾ ಸಮಿತಿ ಹೆಸರಲ್ಲಿ ಹಗಲಿರುಳು ದುಡಿದು, ಮಾಹಿತಿ ಕಲೆಹಾಕಿ ಕಾನೂನಿನ ಮೂಲಕ ಜಯ ಸಿಗಲು ಕಾರಣಕರ್ತರಾದ ದಿವಂಗತ ಬಿ.ಎಸ್. ವಿಠ್ಠಲರಾವ್ ಅವರನ್ನು ಸ್ಮರಿಸುತ್ತ, ದತ್ತಪೀಠದ ನ್ಯಾಯಕ್ಕಾಗಿ ಹೋರಾಟ ನಡೆಸಿಕೊಂಡು ಬಂದ ಭಕ್ತಾದಿ ಕಾರ್ಯಕರ್ತರುಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post