ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಗ್ರೂಪ್ ತಂಡದಿಂದ “ರಜಾ ವಿತ್ ಮಜಾ” ಎಂಬ ಶೀರ್ಷಿಕೆಯಡಿ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಹಾಗೂ ಮಹಿಳೆಯರಿಗಾಗಿ 36 ದಿನಗಳ ಕಾಲ “ಬೇಸಿಗೆ ಶಿಬಿರ”ವನ್ನು ಆಯೋಜಿಸಲಾಗಿದೆ.
ಮೊದಲನೇ ಶಿಬಿರ ಏಪ್ರಿಲ್ 2 ರಿಂದ ಏಪ್ರಿಲ್ 19ರವರೆಗೆ ನಡೆಯಲಿದ್ದು, ಎರಡನೇ ಶಿಬಿರ ಏಪ್ರಿಲ್ 20 ರಿಂದ ಮೇ 7ರವರೆಗೆ ನಡೆಯಲಿದೆ. ಅಥವಾ ಸಂಪೂರ್ಣ 36 ದಿನಗಳು ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಏಪ್ರಿಲ್ 2ರಿಂದ ಮೇ 7ರವರೆಗೆ ಸತತವಾಗಿ ನಡೆಯುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕ ಸಮಯ ಮತ್ತು ದಿನಗಳು ನಮ್ಮ ಶಿಬಿರದಲ್ಲಿ ನೀವೂ ಭಾಗವಹಿಸಬಹುದು.
8 ಮೇ 2022 ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಬೃಹತ್ ವೇದಿಕೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮದ ಅವಕಾಶ ಮತ್ತು ಆಕರ್ಷಕ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಶಿಬಿರಾರ್ಥಿಗಳಿಗೆ ನೀಡಿ ಅಭಿನಂದಿಸಲಾಗುವುದು.
Also read: ಆರ್’ಆರ್’ಆರ್ ಟೀಮ್ ಟೆಂಪಲ್ ರನ್: ಅಮೃತ್ ಸರ್, ಸ್ಟಾಚು ಆಫ್ ಯೂನಿಟಿಗೆ ಭೇಟಿ
ಈ ಶಿಬಿರದಲ್ಲಿ ಮುಖ್ಯವಾಗಿ ಎಲ್ಲಾ ಬಗೆಯ ನೃತ್ಯಗಳು, ಸಿನಿಮಾ ನಟನೆ, ಟಿವಿ ಆಡಿಷನ್ ಕಾರ್ಯಾಗಾರ, ನಿರೂಪಣೆ, ಹಳೆಯ ದೇಸಿ ಆಟಗಳು, ಟೆಂಟ್ ಸಿನಿಮಾ, ಯೋಗ, ಸಂತಸದ ಆಟೋಟಗಳು, ಅಜ್ಜಿ ಕಥೆಗಳು, ನಾಟಕ, ಸಂಗೀತ, ಚಿತ್ರಕಲೆ, ಮೂಕಾಭಿನಯ, ನಿಮ್ಮ ಪ್ರತಿಭೆ ನಮ್ಮ ವೇದಿಕೆ, ಇನ್ನೂ ಹಲವಾರು ಮನರಂಜನೆಗಳು ನಡೆಯಲಿವೆ.
ಶಿಬಿರದಲ್ಲಿ ಭಾಗವಹಿಸುವವರು ಈ ಕೂಡಲೇ 98453 88028ಗೆ ಕರೆ ಮಾಡಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post