ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತರಕಾರಿ ತರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ಪಶು ವೈದ್ಯಕೀಯ ಕಾಲೇಜಿನ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ಶೌವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತನನ್ನು ಗುರುರಾಜ್ ಎಂದು ಗುರುತಿಸಲಾಗಿದ್ದು, ಶುಭ ಮಂಗಳದ ಎದುರಿನ ತಿರುವಿನ ನಿವಾಸವಾಗಿದ್ದ ಗುರುರಾಜ್ ಎಪಿಎಂಸಿ ಯಾರ್ಡ್‌ಗೆ ಹೋಗಿ ತರಕಾರಿ ತರುವುದಾಗಿ ನಿನ್ನೆ ಬೆಳಗ್ಗಿನ ಜಾವ ಮನೆ ಬಿಟ್ಟು ಹೋಗಿದ್ದ ಗುರುರಾಜ್ ನ ಮೃತ ದೇಹ ವೆಟನರಿ ಕಾಲೇಜು ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿತ್ತು.
ಗುರುರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ. ಎರಡು ಕಾರುಗಳನ್ನ ಇಟ್ಟುಕೊಂಡು ಟ್ರಾವೆಲ್ಸ್ ಆರಂಭಿಸಿದ್ದ ಗುರುರಾಜ್ ಆರಂಭದಲ್ಲಿ ಯಶಸ್ವಿಯಾಗಿದ್ದರು.
Also read: ಸಚಿನ್ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ವಿವಿಧ ಸಂಘಟನೆಗಳ ಆಗ್ರಹ
ಆರಂಭದಲ್ಲಿ ಲಾಭದಲ್ಲಿದ್ದ ವ್ಯವಹಾರ ನಂತರದ ದಿನಗಳಲ್ಲಿ ಕೈ ಹತ್ತಲಿಲ್ಲ. ನಂತರ ಲೈಫ್ ಕೇರ್ ಆರಂಭಿಸಿದರು. ಇದು ಸಹ ಕೈ ಹತ್ತಲಿಲ್ಲ. ಈ ವೇಳೆ ಗುರುರಾಜ್ ಗೆ ಮೈತುಂಬ ಸಾಲವಾಗಿತ್ತು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ಗುರುರಾಜ್ ಗೆ ಪತ್ನಿ ಮತ್ತು ಇಬ್ವರು ಮಕ್ಕಳನ್ನ ಅಗಲಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post