ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ದಸರಾವನ್ನು #Shivamogga Dasara ಈ ಬಾರಿಯೂ ಕೂಡ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು, ಇದಕ್ಕೆ ಸರ್ಕಾರ ಕೂಡ ಸ್ಪಂದಿಸಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ( ಚೆನ್ನಿ) #MLA Chennabasappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ ಇದಕ್ಕೆ ಸಂಬಂದಿಸಿದಂತೆ ನಾನು ಮತ್ತು ಡಿ.ಎಸ್. ಅರುಣ್ ಮೊನ್ನೆ ಸಿಎಂ ಭೇಟಿ ಮಾಡಿ ಪ್ರಸ್ತಾಪ ಮಾಡಿದ್ದೇವೆ. ದಸರಾ ಆಚರಣೆಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ ಮುಖ್ಯಮಂತ್ರಿಗಳು ಸಹ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.
ಈಗಾಗಲೇ ಶಿವಮೊಗ್ಗ ದಸರಾ ಆಚರಣೆಗೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಈ ಬಾರಿ ಅದ್ದೂರಿ ದಸರಾ ಆಚರಣೆ ನಡೆಯುತ್ತೆ, ಅಂಬಾರಿ ದಸರಾ ಸಹ ಈ ಸಲ ನಡೆಯುತ್ತೆ ರಾಜ್ಯದಲ್ಲೇ ಎರಡನೇ ಅದ್ದೂರಿ ದಸರಾ ಆಚರಣೆ ನಮ್ಮಲ್ಲಿ ನಡೆಯುತ್ತೆ ಎಂದರು.
Also read: ಹಿಂದೂ ಯುವಕನ ಮೇಲೆ ಮುಸ್ಲಿಂ ಹುಡುಗರಿಂದ ಭೀಕರ ಹಲ್ಲೆ ಆರೋಪ | ವಿಹಿಂಪ ಬೃಹತ್ ಪ್ರತಿಭಟನೆ
ಪಾಲಿಕೆಯಲ್ಲಿ ಈಗಾಗಲೇ 2.5 ಕೋಟಿ ಹಣವಿದೆ,ಇದರ ಜೊತೆಗೆ ಸರ್ಕಾರ ಕೊಡುವ ಹಣವನ್ನೂ ಸೇರಿಸಿ ಕೊಂಡು ಅದ್ದೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಈಗಾಗಲೇ 14 ಸಮಿತಿಗಳು ಸಹ ಪಾಲಿಕೆ ಆಯುಕ್ತರು ಮಾಡಿದ್ದಾರೆ ಎಂದರು.
ಸಕ್ರೆಬೈಲು ಆನೆ ಬಿಡಾರದಿಂದ ಆನೆ ಕಳಿಸಲು ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇವೆ. ಮೂರು ಗಂಡು ಆನೆಗಳು ಈ ಬಾರಿಯ ದಸರಾದಲ್ಲಿ ಬಾಗಿ ಆಗಲಿವೆ. ಗಮಕ ದಸರಾ, ಪೌರ ಕಾರ್ಮಿಕರ ದಸರಾ, ಪತ್ರಕರ್ತರ ದಸರಾ ಮಾಡಲು ಕೂಡ ನಿರ್ಧರಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post