ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರಿಯ ಮೃಗಾಲಯ ಪ್ರಾಧಿಕಾರ ನವದೆಹಲಿರವರಿಂದ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ #Shivamogga Lion Safari ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಹೆಚ್ಚುವರಿಯಾಗಿರುವ ಪ್ರಾಣಿಗಳನ್ನು ನ.11 ರಿಂದ ನ.16ರ ವರೆಗೆ ವಿನಿಮಯ ಕಾರ್ಯಕ್ರಮ ನಡೆಸಲಾಗಿದೆ.
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಟೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ಏಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್’ಗೆ ಕಳುಹಿಸಲಾಗಿದೆ.
ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್’ನಿಂದ ಘಾರಿಯಾಲ, ಲೇಸ್ಸರ್ ರೀಹಾ, ಸ್ಟೀಪಿಡ್ ಹೈನಾ, ಇಂಡಿಯನ್ ಕ್ರೈಸ್ಟೇಡ್ ಪೋರ್ಕಪೈನ್, ಸನ್ ಕೌನ್ಸರ್ ಪ್ರಾಣಿಗಳನ್ನು ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ತರಲಾಗಿದೆ.
ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಘಾರಿಯಾಲ ಸೇರ್ಪಡೆಗೊಂಡಿದ್ದು ಹಾಗೂ ಪ್ರಥಮ ಬಾರಿ ಮೃಗಾಲಯಕ್ಕೆ ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿ ಸಂರಕ್ಷಣೆಯ ಬಗ್ಗೆ ಪ್ರಕೃತಿ ಶಿಕ್ಷಣ ನೀಡಲು ಈ ಪ್ರಭೇದದಿಂದ ಸಹಾಯಕವಾಗಲಿದೆ. ಪ್ರಥಮ ಬಾರಿ ಮೃಗಾಲಯಕ್ಕೆ ಸೌತ್ ಆಫ್ರಿಕನ್’ಗೆ ಸಂಬಂಧಿಸಿದ ಪಕ್ಷಿಗಳ ಪ್ರಭೇದವಾದ ಲೇಸ್ಸರ್ ರೀಹಾ ಮತ್ತು ಸನ್ ಕೌರ್ನ್ಸ ಸೇರ್ಪಡೆಯಾಗಿರುತ್ತವೆ. ಭಾರತೀಯ ಕ್ರೆಸ್ಟೆಡ್ ಮುಳ್ಳುಹಂದಿ ಬಹುದಿನಗಳ ನಂತರ ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸಂಬಂಧಿಸಿದ ಅನಿಮಲ್ ಕಲೆಕ್ಷನ್ ಪ್ಲಾನ್’ಗೆ ಮತ್ತೊಂದು ಸೇರ್ಪಡೆಯಾಗಿದೆ. ಗಂಡು ಕತ್ತೆ ಕಿರುಬ ಪ್ರಾಣಿಯನ್ನು ಬ್ಲಡ್ಲೈನ್ ಎಕ್ಸಚೆಂಗಾಗಿ ವಿನಿಮಯ ಮಾಡಿಕೊಳ್ಳಲಾಗಿದೆ.
ಹುಲಿ-ಸಿಂಹಧಾಮ, ತ್ಯಾವರೆಕೊಪ್ಪ ವೈದ್ಯಾಧಿಕಾರಿಗಳು ಪ್ರಾಣಿಗಳು ಆರೋಗ್ಯದಿಂದಿರುವುದಾಗಿ ತಿಳಿಸಿರುತ್ತಾರೆ. ಈ ಪ್ರಾಣಿಗಳ ಆಗಮನದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ಪ್ರಭೇದಗಳ ಸಂಖ್ಯೆ ಒಟ್ಟು 30 ರಿಂದ 34ಕ್ಕೆ ಹೆಚ್ಚಳವಾಗಿದೆ ಎಂದು ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post