ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಗಡಿನ ಶೆಡ್ ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿಟ್ಟಿರುವ ಘಟನೆ ಆನವೇರಿಯಲ್ಲಿ ನಡೆದಿದೆ.
ಆನವೇರಿಯ ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿ ರಾವ್ ಅವರ ಮಗ ರಕ್ಷಿತ್ (22) ಮೃತ ಯುವಕ ಎಂದು ಗುರುತಿಸಲಾಗಿದ್ದು, ಆನವೇರಿಯ ಕೆ.ಕೆ ರಸ್ತೆಯಲ್ಲಿ ರಕ್ಷಿತ್, ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರಿ ಹೋಟೆಲ್ ಶೆಡ್ ನಿರ್ಮಿಸುವ ಸಂದರ್ಭದಲ್ಲಿ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಯುವಕ ಸಾವಿಗೀಡಾಗಿದ್ದಾನೆ.
Also read: ಶಿವಮೊಗ್ಗ ಮೆಟ್ರೋ ಆಸ್ಪತ್ರೆ ಐತಿಹಾಸಿಕ ಸಾಧನೆ | `ಆರ್ಬೈಟಲ್ ಅಥೆರೆಕ್ಟಮಿ’ ಯಶಸ್ವಿ | ಇದು ನೀವು ಕೇಳಿರದ ಚಿಕಿತ್ಸೆ
ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post