ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೇಸಿಗೆ ಶಿಬಿರದಲ್ಲಿ ಮಕ್ಕಳ ಬದುಕಿನ ಮೌಲ್ಯ ವೃದ್ಧಿಗೆ ಪೂರಕವಾದ ವಿಚಾರ ಮತ್ತು ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅವರು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಒಳಿತು ಮಾಡುವಂತಾಗಲಿ ಎಂದು ಸರ್ಜಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯರು, ಯುವ ಮುಖಂಡರು ಧನಂಜಯ್ ಸರ್ಜಿ ಹೇಳಿದರು.
ಅವರು ನಗರದ ಕುವೆಂಪು ರಂಗಮಂದಿರ ದಲ್ಲಿ ಆಯೋಜಿಸಲಾಗಿದ್ದ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಜಾ ವಿತ್ ರಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದ ಯಶಸ್ಸಿಗೆ ಶಿಕ್ಷಣವೇ ಕೀಲಿಕೈಯಾಗಿದ್ದು, ಮಕ್ಕಳು ಗಳಿಸುವ ಕೌಶಲ್ಯಕ್ಕೆ ಮಿತಿಯಿಲ್ಲ. ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಅವರ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
Also read: ಕ್ರೈಸ್ಟ್‌ಕಿಂಗ್: ರಾಷ್ಟ್ರಮಟ್ಟದ ಜೆಇಇ ಬಿ-ಪ್ಲಾನಿಂಗ್‌ನಲ್ಲಿ ಶೈನಿ ಅಸ್ಮಾ ಸಾಲ್ಡಾನ್ಹಗೆ 149ನೇ ರ್‍ಯಾಂಕ್
ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಅವಕಾಶಗಳನ್ನು ಕಲ್ಪಿಸುವ ಮೂಲಕ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಇ. ಕಾಂತೇಶ್, ಉಪಾಧ್ಯಕ್ಷ ಈ ವಿಶ್ವಾಸ್ ಮತ್ತು ಸಂಸ್ಥೆಯ ಸಲಹೆಗಾರರಾದ ಸಿಂಪ್ಲೇಕ್ಸ್ ರಮೇಶ್, ಸಂಸ್ಥೆಯ ಮುಖ್ಯಸ್ಥರು ಸಂಸ್ಥಾಪಕ ಶಶಿಕುಮಾರ್ ಎನ್ , ಸಂಸ್ಥೆಯ ಮುಖ್ಯ ನಿರ್ದೇಶಕರಾದ ಅಜಯ್ ಕುಮಾರ್ ಎನ್. ರಂಗನಾಥ್, ಆರ್. ವಿನಯ್, ಎಮ್. ಜಿ. ದರ್ಶನ್, ಸಾಥ್ವಿಕ್, ಜೀತೇಂದ್ರ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post