ಕಲ್ಪ ಮೀಡಿಯಾ ಹೌಸ್ | ತಿರುಪತಿ(ಅಮರಾವತಿ) |
ವೈಕುಂಠ ಏಕಾದಶಿ ಮುನ್ನ ತಿರುಪತಿಯಲ್ಲಿ #Tirupati ನಡೆದ ಕಾಲ್ತುಳಿತದ ದುರಂತ ಮಾಸುವ ಮುನ್ನವೇ ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೊಂದು ದುರಂತ ನಡೆದಿದೆ.
ಟಿಟಿಡಿ #TTD ಸೌಲಭ್ಯದ ದ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದ ಮೂರು ವರ್ಷದ ಬಾಲಕನೊಬ್ಬ ದುರಂತ ಮರಣವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
Also Read>> ಕಲಾವಿದರ ಕೈಚಳಕ | 10 ಚಿತ್ರ | ವೃದ್ಧಿಸಿದ ಬೆಂಗಳೂರಿನ ಸೌಂದರ್ಯ | ಏನೆಲ್ಲಾ ಕಥೆ ಹೇಳುತ್ತಿವೆ ನೋಡಿ
ಮೃತ ಬಾಲಕನ ವಿವರ ತಿಳಿದುಬಂದಿಲ್ಲವಾದರೂ, ಕಡಪ ಜಿಲ್ಲೆಯ ಮೂಲದವರು ಎಂದು ವರದಿಯಾಗಿದೆ.
ಗುರುವಾರ ಸಂಜೆ ನಿಗದಿಯಾಗಿದ್ದ, ದೇವರ ದರ್ಶನಕ್ಕಾಗಿ ಕಡಪ #Kadapa ಜಿಲ್ಲೆಯ ಚಿನ್ನ ಚೌ ಗ್ರಾಮದಿಂದ ಕುಟುಂಬವು ಪ್ರಯಾಣಿಸಿತ್ತು. ಮಧ್ಯಾಹ್ನ 3.30 ರ ಸುಮಾರಿಗೆ ತನ್ನ ಸಹೋದರನೊಂದಿಗೆ ಬಾಲಕ ಆಟವಾಡುತ್ತಿದ್ದ. ಮೂರನೇ ಸಂಖ್ಯೆಯ ವರಾಂಡಾ ಬಳಿಯ ಪದ್ಮನಾಭ ನಿಲಯದಲ್ಲಿ ಮೆಟ್ಟಿಲುಗಳ ಗ್ರಿಲ್ ಮೂಲಕ ಇದ್ದಕ್ಕಿದ್ದಂತೆ ಜಾರಿ ಬಿದ್ದಿದ್ದಾನೆ.
Also Read>> ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಪೋಷಕರೊಂದಿಗೆ ಬಾಲಕ ತಿರುಪತಿಗೆ ದೇವರ ದರ್ಶನಕ್ಕೆ ಬಂದಿದ್ದ. ಬಾಲಕ ತನ್ನ ಸಹೋದರನೊಂದಿಗೆ ಆಟವಾಡುತ್ತಿz್ದÁಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಆಂಧ್ರಪ್ರದೇಶದ #Andrapradesh ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post