No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Wednesday, May 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ಕ್ಷೇತ್ರದ ನಾಲ್ಕು ಪಕ್ಷದ ಅಭ್ಯರ್ಥಿಗಳೊಡನೆ ಸಂವಾದ

ಚುನಾವಣಾ ಕಣದಲ್ಲಿರುವ ಸ್ಪರ್ಧಿಗಳ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 25, 2023
in ಶಿವಮೊಗ್ಗ
0
ಬೈಯ್ಯುವ ಹಾಗೂ Buy ಯುವ By-Electionನ ಉಪಯೋಗ

ಬೈಯ್ಯುವ ಹಾಗೂ Buy ಯುವ By-Electionನ ಉಪಯೋಗ

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಇಂದು ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಲ್ಕು ಪಕ್ಷದ ಅಭ್ಯರ್ಥಿಗಳೊಡನೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.

ನಾಲ್ಕು ಜನರಿಗೂ ಒಂದೇ ರೀತಿಯ ಪ್ರಶ್ನೆಯನ್ನು ಮುಂದಿಟ್ಟು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ತಿಳಿಸಲಾಯಿತು. ತಾವು ಶಾಸಕರಾಗಿ ಆಯ್ಕೆಯಾದರೆ ತಮ್ಮ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ಹೇಗಿರಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ವಾಣಿಜ್ಯ ಸಂಘದ ಅಧ್ಯಕ್ಷ ಪ್ರಾಸ್ತಾವಿಕ ಮಾತನಾಡಿ, ನಾಲ್ಕೂ ಜನರಿಗೆ ಸೂಚನೆ ನೀಡಿದರು.

ಅದರಂತೆ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ಗೌಡ, ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, Ayanuru Manjunath ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, SNChannabasappa ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ HCYogish ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ನೇತ್ರಾವತಿ ಆಮ್ ಆದ್ಮಿ ಪಕ್ಷ: ಮಹಿಳೆಯರಿಗೆ ಆದ್ಯತೆ, ಶಿವಮೊಗ್ಗದ ಅಭಿವೃದ್ಧಿಗೆ ಬದ್ಧತೆ
ಶಿವಮೊಗ್ಗದಲ್ಲಿ ಮುಖ್ಯವಾಗಿ ಉದ್ಯೋಗ ನಿರ್ಮಾಣ ಮಾಡಬೇಕಾಗಿದೆ. ಯುವಕರಿಗೆ ಇಲ್ಲಿ ಉದ್ಯೋಗದ ಅವಕಾಶಗಳು ತುಂಬಾ ಕಡಿಮೆ ಇದೆ. ಅದರಲ್ಲೂಮಹಿಳೆಯರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಕಷ್ಟಪಟ್ಟು ಓದಿ ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇವರೆಲ್ಲರಿಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇನೆ ಎಂದು ನೇತ್ರಾವತಿ ತಮ್ಮ ಅಭಿಪ್ರಾಯ ತಿಳಿಸಿದರು.

ಮುಖ್ಯವಾಗಿ ಮಹಿಳೆಯರಿಗೆ ರಕ್ಷಣೆ ಬೇಕಾಗಿದೆ. ಶಿವಮೊಗ್ಕ್ಕೆ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಮುಖ್ಯವಾಗಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ನಮ್ಮ ಪಕ್ಷದ ಮೂಲ ಸಿದ್ಧಾಂತವೇ ಭ್ರಷ್ಟಾಚಾರ ತೊಲಗಿಸುವುದು. ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವಂತಗಬೇಕು. ಮುಖ್ಯವಾಗಿ ಉದ್ಯಮಿಗಳು ಇಲ್ಲಿಗೆ ಬರಬೇಕು. ಶಿವಮೊಗ್ಗಕ್ಕೆ ಮತ್ತಷ್ಟು ಗೌರವ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದರು.
ಆಯನೂರು ಮಂಜುನಾಥ್ ಜೆಡಿಎಸ್ ಪಕ್ಷ : ನೆಮ್ಮದಿಗೆ ಭಂಗ ತರುವವರ ಒದ್ದು ಹಾಕಬೇಕು;
ಶಿವಮೊಗ್ಗಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಾಂತಿ. ಶಾಂತಿ ಇಲ್ಲದ ಕಾರಣಕ್ಕಾಗಿಯೇ ಇಲ್ಲಿ ಉದ್ಯಮಿಗಳು ಬರುತ್ತಿಲ್ಲ. ಕೈಗಾರಿಕೆಗಳು ಸ್ಥಾಪನೆ ಆಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ಕೇವಲ ಗಲಾಟೆ, ಅಶಾಂತಿಯಿಂದ ನಲುಗಿದ ಶಿವಮೊಗ್ಗಕ್ಕೆ ಉದ್ಯಮಿಗಳು ಬರುವಂತೆ ಮಾಡಲು ನೆಮ್ಮದಿಗೆ ಭಂಗ ತರುವವರನ್ನು ಒದ್ದು ಹಾಕಿದಾಗ ಮಾತ್ರ ಈಗಿರುವ ಅಶಾಂತಿ ನಗರವನ್ನು ನಾನು ಶಾಸಕನಾದರೆ ಖಂಡಿತ ಬದಲಾಯಿಸುವೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.

ಚುನಾವಣೆಯೇ ಪ್ರಜಾಪ್ರಭುತ್ವದ ಉತ್ಸವ. ರಾಜಕಾರಣ ಕೇವಲ ಅಧಿಕಾರದ ರೋಮಾಂಚನವಲ್ಲ. ಆಶೋತ್ತರಗಳನ್ನು ಶಾಂತಿಯ ಫಸಲನ್ನು ಬೆಳೆಯುವ ಅವಕಾಶ ಶಾಸಕನಿಗೆ ಸಿಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ರಸ್ತೆ, ನೀರು, ವಿದ್ಯುತ್, ವಿಮಾನ, ಆದರೆ ಉದ್ಯಮಿಗಳು ಮಾತ್ರ ಬರುತ್ತಿಲ್ಲ. ಇದು ಬದಲಾಗಬೇಕಾಗಿದೆ ಎಂದರು.
ಎಸ್.ಎನ್. ಚನ್ನಬಸಪ್ಪ -ಬಿಜೆಪಿ: ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆದರೆ ಸುಮ್ಮನಿರಬೇಕೆ
ಹಿಂದೂ ಸಮಾಜದ ಮೇಲೆ ಹಲ್ಲೆಯಾದರೆ, ಹಿಂದುಗಳನ್ನು ಕೊಂದರೆ ಅದನ್ನು ಪ್ರಶ್ನಿಸುವುದೇ ತಪ್ಪೇ. ಶಾಂತಿಯನ್ನು ಕದಡುವವರು ನಾವಲ್ಲ. ವಿಶ್ವವೇ ಒಂದು ಕುಟುಂಬ ಎಂದು ಹಿಂದು ಸಮಾಜ ಬಯಸುತ್ತದೆ. ಆದರೆ ಅಶಾಂತಿಗೆ ಕಾರಣರಾದವರ ವಿರುದ್ಧ ನಮ್ಮ ಧ್ವನಿ ಸದಾ ಇರುತ್ತದೆ. ಆದರೆ ಈ ಧ್ವನಿಯನ್ನೇ ಕೋಮುವಾದ ಎಂದರೆ ಹೇಗೆ ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.

ಶಿವಮೊಗ್ಗಕ್ಕೆ ತನ್ನದೇ ಇತಿಹಾಸವಿದೆ. ಇದು ಸಾಂಸ್ಕೃತಿಕ ನಗರ. ಶಾಂತಿಯನ್ನು ಬಯಸುವವರು ನಾವೇ. ಆದರೆ ಈ ಶಾಂತಿಯನ್ನು ಕದಡುವ ಒಂದು ವರ್ಗವೇ ಇಲ್ಲಿದೆ. ಶಾಂತಿಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತೇವೆ. ಶಾಂತಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ ಎಂದರು.

ನಾನು ಹುಟ್ಟುವ ಮೊದಲೇ ಇಲ್ಲಿ ಕೋಮು ಗಲಭೆ ಆಗಿತ್ತು. 1933ರಲ್ಲಿಯೇ ಅಶಾಂತಿ ತಲೆದೋರಿತ್ತು. ನಂತರದ ದಿನಗಳಲ್ಲಿ ಹಿಂದುಗಳ ಕೊಲೆಗಳು ನಡೆದವು. ಆಗಲೂ ನಾವು ಸಹಿಸಿಕೊಂಡಿದ್ದೇವೆ. ಈ ಎಲ್ಲದರ ಮಧ್ಯೆ ಎಲ್ಲರೂಒಟ್ಟಾಗಿ ಬಾಳಬೇಕು ಎಂಬುದೇ ನಮ್ಮ ತತ್ವ. ಜೊತೆಗೆ ಶಿವಮೊಗ್ಗದ ಅಭಿವೃದ್ಧಿಗೆ ಯಾವತ್ತಿಗೂ ನಮ್ಮ ಮೊದಲ ಆದ್ಯತೆ ಎಂದರು.
Kalahamsa Infotech private limitedಹೆಚ್.ಸಿ. ಯೋಗೀಶ್ ಕಾಂಗ್ರೆಸ್ ಪಕ್ಷ: ಉದ್ದಿಮೆಗಳು ಶಿವಮೊಗ್ಗಕ್ಕೆ ಬರಬೇಕು
ಶಿವಮೊಗ್ಗದಲ್ಲಿ ಇನ್ನು ಗಲಭೆಗಳೇ ಇರಬಾರದು. ಪ್ರಪಂಚದ ಎಲ್ಲಾ ಉದ್ಮಮಿಗಳು ಸಾಂಸ್ಕೃತಿಕ ನಗರಕ್ಕೆ ಕಾಲಿಡಬೇಕು. ಅಂತಹ ವಾತಾವರಣವನ್ನು ನಿರ್ಮಿಸಬೇಕು ಎಂಬುದೇ ನನ್ನ ಉದ್ದೇಶವಾಗಿದೆ. ಕೋಮು ರಾಜಕಾರಣ ಕೊನೆಯಾಗಬೇಕು. ಮಾನವೀಯತೆಯ ರಾಜಕಾರಣ ನೆಲೆಸಬೇಕು ಎಂದು ಹೆಚ್.ಸಿ. ಯೋಗೀಶ್ ಹೇಳಿದರು.

ನಾನು ಮಹಾನಗರ ಪಾಲಿಕೆ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ ಉತ್ತಮ ಕೆಲಸ ಮಾಡಿರುವೆ. ಹೋರಾಟಗಳ ರೂಪಿಸಿಕೊಂಡಿರುವೆ. ಮುಖ್ಯವಾಗಿ ಟ್ರೇಡ್ ಲೈಸೆನ್ಸ್‌ಗೆ ಹೊಸತನ ನೀಡಿರುವೆ. ವ್ಯಾಪಾರಿಗಳಿಗೂ ಅನುಕೂಲ ಮಾಡಿರುವೆ. ಬೀದಿಬದಿ ವ್ಯಾಪಾರಿಗಳಿಗೂ ಹೇಗೆ ಸರಳ ತೆರಿಗೆ ಹಾಕಬೇಕು ಎಂದು ಚರ್ಚಿಸಿರುವೆ. ಒಂದು ಜನಸ್ನೇಹಿ ಟ್ರೇಡ್ ಲೈಸೆನ್ಸ್ ಗುರುತಿಸಿದ ಕೀರ್ತಿ ನನಗಿದೆ ಎಂದು ಯೋಗೀಶ್ ತಿಳಿಸಿದರು.

ನಾನು ಶಾಸಕನಾಗಿ ಆಯ್ಕೆಯಾದರೆ ಶಿವಮೊಗ್ಗದ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲಾ ವರ್ಗದ ಜನರ ನೆಮ್ಮದಿಗೆ ಪ್ರಯತ್ನಿಸುವೆ. ಮತ್ತೆಂದೂ ಗಲಭೆಗಳಾಗದಂತೆ ನಿಯಂತ್ರಿಸುವೆ. ಮುಖ್ಯವಾಗಿ ನಮ್ಮ ಪಕ್ಷದ ಗ್ಯಾರಂಟಿಯಂತೆ ಎಲ್ಲಾ ಬಡ ಮತ್ತು ಮಧ್ಯಮ ವರ್ಗದವರ ಬದುಕನ್ನು ಹಸನುಗೊಳಿಸುವೆ. ಉದ್ಯೋಗಕ್ಕೆ ಆದ್ಯತೆ ನೀಡುವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Ayanuru ManjunathHCYogishKannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsSNChannabasappaಆಯನೂರು ಮಂಜುನಾಥ್ಎಸ್.ಎನ್. ಚನ್ನಬಸಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಹೆಚ್.ಸಿ. ಯೋಗೀಶ್
Share196Tweet123Send
Previous Post

ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿ ಅಶೋಕ ನಾಯ್ಕ ಗೆಲುವು ಸಾಧಿಸಲಿದ್ದಾರೆ

Next Post

ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳುತ್ತಿರುವ ಬಿಜೆಪಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳುತ್ತಿರುವ ಬಿಜೆಪಿ

ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳುತ್ತಿರುವ ಬಿಜೆಪಿ

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

May 5, 2026
Impressive concert by Smt. Surabhi Sheshadri

Impressive concert by Smt. Surabhi Sheshadri

May 5, 2026
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

May 5, 2026
ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ | ಸಾರ್ವಜನಿಕರಲ್ಲಿ ಆತಂಕ ಬೇಡ: ಜಿಲ್ಲಾಧಿಕಾರಿ ಸ್ಪಷ್ಟನೆ

May 5, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಗಮನಿಸಿ! ಈ ದಿನ ಬೆಂಗಳೂರಿನಿಂದ ಹೊರಡುವ ಈ ರೈಲುಗಳ ಸಂಚಾರದಲ್ಲಿ ಬದಲಾವಣೆ

May 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL