ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರ್ಯಾದಾ ಹತ್ಯೆಯಂತಹ ಕ್ರೂರ ಹತ್ಯೆಗಳ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕಾಂಗ್ರೇಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಅವರು ಅಭಿನಂದಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆಧಾರವಾಡಜಿಲ್ಲೆಯ ಹುಬ್ಬಳ್ಳಿಯ ಇನಾಂ ವೀರಾಪುರ ಎಂಬ ಗ್ರಾಮದಲ್ಲಿಅನ್ಯ ಕೋಮಿನ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಕಾರಣಕ್ಕೆ ಮಾನ್ಯ ಪಾಟೀಲ್ ಎಂಬ 6 ತಿಂಗಳ ಘರ್ಭಿಣಿಯುವತಿಯನ್ನು ಸ್ವಂತತಂದೆಯೆ ಕೆಲವರೊಂದಿಗೆ ಸೇರಿಕೊಂಡುಕೊಡಲಿಯಿಂದ ಭೀಕರವಾಗಿಕೊಚ್ಚಿ ಹತ್ಯೆ ಮಾಡಿದ್ದರು.ಪ್ರೀತಿಸಿ ವಿವಾಹವಾಗಿದ್ದದಲಿತ ಸಮುದಾಯಯುವಕನಕುಟುಂಬದ ಮೇಲೂ ಭೀಕರ ಹಲ್ಲೆ ಮಾಡಿದಘಟನೆಇಡೀ ಮಾನವ ಕುಲವೇ ತಲೆತಗ್ಗಿಸುವಂತೆ ಮಾಡಿತ್ತು. ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ಮುಂದೆ ನೆಡೆಯದಂತೆತಡೆಯಲುರಾಜ್ಯದಲ್ಲಿ ಪ್ರತ್ಯೇಕಕಠಿಣ ಕಾನೂನು ಜಾರಿಗೆತರಬೇಕೆಂದುರಾಜ್ಯಾಂದ್ಯಂತ ಒತ್ತಾಯಗಳು ಕೇಳಿ ಬಂದಿದ್ದವು. ಜಿಲ್ಲೆಯಲ್ಲಿಯೂ ಕೂಡ ಕೆಲವು ಸಮಾಜಮುಖಿ ಹೋರಾಟಗಾರರುಕಠಿಣಕಾಯ್ದೆಯಜಾರಿಗೆರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಈ ಒತ್ತಾಯ ಶಿವಮೊಗ್ಗದಿಂದಲೇ ಆರಂಭವಾಗಿತ್ತು. ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಕಾಯ್ದೆ ಜಾರಿಗೆ ಆಗ್ರಹಿಸಿದ್ದರು. ರಾಜ್ಯದ ಎಲ್ಲೆಡೆ ಕೂಡ ಕೂಗು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ.
ಅಂತರ್ಜಾತಿ ವಿವಾಹಗಳು ನೆಡೆಯುತ್ತಿರುವುದು ಈಗಿನ ಕಾಲದಲ್ಲಿ ಮಾತ್ರವಲ್ಲ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ. ಯಾರುಅಂತರ್‍ಜಾತಿ ವಿವಾಹಗಳನ್ನು ವಿರೋಧಿಸುತ್ತಿದ್ದಾರೋ ಅಂತವರು ಶ್ರೀಮಂತರ ಅಂತರ್‍ಜಾತಿ ವಿವಾಹಗಳನ್ನು ತಮ್ಮ ಮೌನದ ಮೂಲಕ ಒಪ್ಪಿಕೊಂಡು ಬಡ ವರ್ಗಗಳಲ್ಲಿ ನಡೆಯುವ ಅಂತರ್‍ಜಾತಿ ವಿವಾಹಗಳನ್ನು ಮಾತ್ರ ವಿರೋಧಿಸುವ ಧೋರಣೆಯನ್ನು ಅವರು ಖಂಡಿಸಿದ್ದಾರೆ.
ಹುಬ್ಬಳ್ಳಿಯ ಮರ್ಯಾದಾಗೇಡು ಹತ್ಯೆಯ ಬಗ್ಗೆ ಕೇಳಿ ಬಂದ ಭಾರಿ ವಿರೋಧದ ಹಿನ್ನೆಲೆಯಲ್ಲಿತ್ವರಿತವಾಗಿ ಗಮನ ಹರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುದೇಶದಲ್ಲೆಜಾರಿಗೆತರದ ಮರ್ಯಾದಾಗೇಡು ಹತ್ಯೆಯಂತಕ್ರೂರ ಹತ್ಯೆಗಳ ತಡೆಗೆಕಾಯ್ದೆಜಾರಿಗೆತರುವ ಬಗ್ಗೆ ಘೋಷಣೆ ಮಾಡಿರುವುದುಕಾಂಗ್ರೇಸ್ ಪಕ್ಷದ ಸರ್ಕಾರಗಳಿಂದ ಮಾತ್ರ ಸಮಸಮಾಜ ನಿರ್ಧಾರಗಳ ಕೈಗೊಳ್ಳಲು ಸಾಧ್ಯಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದೃಢ ನಿಧಾರವೇ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರತ್ವರಿತವಾಗಿ ಮರ್ಯಾದೆಗೇಡು ಹತ್ಯೆಗಳ ತಡೆಕಾಯ್ದೆಯನ್ನುಜಾರಿಗೆತರಬೇಕೆಂದು ವಕ್ತಾರ ವೈ.ಬಿ. ಚಂದ್ರಕಾಂತ್ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















