ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವತಿಯಿಂದ ಪ್ರದಾನವಾಗುವ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ (Shivamogga) ಶಿವಮೊಗ್ಗದ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಅವರಿಗೆ ಸಂದಿದೆ.
ಬೆಂಗಳೂರಿನ (Bengaluru) ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಇಂದು ನೆರವೇರಿದ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು.
Also Read>> Udupi | ಟೈಮಿಂಗ್ಸ್ ಸ್ಪರ್ಧೆ ಮಿತಿಮೀರಿ – ಪ್ರಯಾಣಿಕರಿದ್ದಾಗಲೇ ಬಸ್ ಡಿಕ್ಕಿ
ಸಂಸ್ಕೃತ ಉಪನ್ಯಾಸಕರಾದ ಡಾ. ಮೈತ್ರೇಯಿ ಆದಿತ್ಯ (ಶಿವಮೊಗ್ಗ) ಅವರ ಶ್ರೀ ವಾದಿರಾಜರ ತೀರ್ಥಪ್ರಬಂಧ ಕೃತಿಗೆ ಗ್ರಂಥ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ವೇಳೆ ಲೇಖಕರಾದ ಪ್ರೊ. ಕೆ.ಇ. ರಾಧಾಕೃಷ್ಣ, ವಾಚಸ್ಪತಿ ಶಾಸ್ತ್ರಿ ಜೋಶಿ, ಡಾ. ಕೆ.ಎಸ್. ಕೃಷ್ಣಮಚಾರ್ಯ (ಕೆಂಪದಾಳಿಹಳ್ಳಿ) ಹಾಗೂ ಡಾ. ರೇಖಾದೇವಿ ಎಸ್.ಎಚ್. ಅವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕುಲಪತಿಗಳಾದ ಡಾ. ಎಸ್. ಅಹಲ್ಯಾ, ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್, ಮೇಲುಕೋಟೆ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಉಮಾಕಾಂತ ಭಟ್ಟ, ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ತಿರುಪತಿಯ ನಿವೃತ್ತ ಪ್ರಾಧ್ಯಾಪಕರಾದ ಆಚಾರ್ಯ ಜಾನಮದ್ದಿ ರಾಮಕೃಷ್ಣ ಶಾಸ್ತ್ರಿ, ಕುಲಸಚಿವರಾದ ಪ್ರೊ. ವಿ. ಗಿರೀಶ್ ಚಂದ್ರ ಹಾಗೂ ಹಣಕಾಸು ಅಧಿಕಾರಿಗಳಾದ ಶ್ರೀಮತಿ ಶೃತಿ ಐ. ಉಪಸ್ಥಿತರಿದ್ದರು.
Shivamogga | Sanskrit Book Award Presented
The Sanskrit Book Award presented by Karnataka Sanskrit University was conferred today at Sri Krishnaraja Parishat Hall in Chamarajapet.
On this occasion, Dr. Maitreyi Aditya from Shivamogga was honoured with the award for her work “Sri Vadiraja’s Teerthaprabandha.”
Writers including Prof. K.E. Radhakrishna, Vachaspati Shastri Joshi, Dr. K.S. Krishnamacharya (Kempadalli Halli), and Dr. Rekhadevi S.H. were also felicitated during the event.
The programme was attended by Vice-Chancellor Dr. S. Ahalya, senior Sanskrit scholar and Padma Bhushan awardee Dr. R. Ganesh, retired Principal of Melukote Sanskrit College Dr. Umakanta Bhat, former Vice-Chancellor Prof. Mallepuram G. Venkatesh, retired professor of National Sanskrit University, Tirupati, Acharya Janamaddi Ramakrishna Shastri, Registrar Prof. V. Girish Chandra, and Finance Officer Smt. Shruti I., among others.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










