ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆರ್. ಮಂಜುನಾಥ್ ಗೌಡರ ಸದಸ್ಯತ್ವ ರದ್ದು ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ರದ್ದಾಗಿದೆ.
ಹೈಕೋರ್ಟ್ ಮಂಜುನಾಥ್ ಗೌಡರ ಸದಸ್ಯತ್ವ ರದ್ದು ಮಾಡಿದ ಕ್ರಮಕ್ಕೆ ತಡೆಯಾಜ್ಞೆ ನೀಡುವ ಮೂಲಕ ಮತ್ತೊಂದು ಬೆಳವಣಿಗೆಗೆ ಮುನ್ನುಡಿ ಬರೆದಿದೆ.

ಹಾಲಿ ನಿರ್ದೇಶಕರೂ, ಅಧ್ಯಕ್ಷರು ಆಗಿದ್ದ ಮಂಜುನಾಥ್ ಗೌಡರನ್ನು ಸರ್ಕಾರ 29(ಸಿ) ಸಹಕಾರಿ ಕಾಯ್ದೆಯಡಿ ಬ್ಯಾಂಕ್ ಸದಸ್ಯತ್ವ ರದ್ದು ಮಾಡಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ರಾಜೀನಾಮೆ ನೀಡದೆ ಕಾನೂನು ಹೋರಾಟ ನಡೆಸಿದ್ದರು.
ಸದ್ಯದ ಮಾಹಿತಿಯ ಪ್ರಕಾರ ಸದಸ್ಯತ್ವ ರದ್ದು ಮಾಡಿದ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಯಥಾ ಪ್ರಕಾರ ಹಾಲಿ ಅಧ್ಯಕ್ಷ ಸ್ಥಾನವನ್ನು ಆರ್.ಎಂ. ಮಂಜುನಾಥ್ ಗೌಡ ಅಲಂಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
Get In Touch With Us info@kalpa.news Whatsapp: 9481252093

















