ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಕಂಟೋನ್ಮೆಂಟ್-ವೈಟ್’ಫೀಲ್ಡ್ ಕ್ವಾಡ್ರುಪ್ಲಿಂಗ್ ಯೋಜನೆಗೆ ಅಗತ್ಯವಿರುವ ಮಾರ್ಗ ಮತ್ತು ವಿದ್ಯುತ್ ಬ್ಲಾಕ್’ನಿಂದಾಗಿ, ಈ ಕೆಳಗಿನ ರೈಲುಗಳನ್ನು ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಭಾಗಶಃ ರದ್ದುಗೊಳಿಸಲಾಗುತ್ತದೆ.

ಈ ಎಲ್ಲಾ ರೈಲುಗಳ ಮಾರ್ಗ ಬದಲಾವಣೆ:
- 06269 ಸಂಖ್ಯೆಯ ಮೈಸೂರು-ಎಸ್’ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂರ್ಜ ವಿಶೇಷ, ಅಕ್ಟೋಬರ್ 27 ರಿಂದ ಅಕ್ಟೋಬರ್ 31 ರವರೆಗೆ ಮತ್ತು ನವೆಂಬರ್ 03ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ ಮತ್ತು ಬೆಂಗಳೂರು ಮೂಲಕ ಸಂಚರಿಸಲು ತಿರುಗಿಸಲಾಗುತ್ತದೆ. ಬೆಂಗಳೂರು ಕಂಟೋನ್ಮೆಂಟ್’ನಲ್ಲಿ ನಿಲುಗಡೆಯನ್ನು ಬಿಟ್ಟುಬಿಡಲಾಗುತ್ತದೆ.
- 12658 ಸಂಖ್ಯೆಯ ಅಕ್ಟೋಬರ್ 30ರಂದು ಪ್ರಾರಂಭವಾಗುವ ಕೆಎಸ್’ಆರ್ ಬೆಂಗಳೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ಪ್ರಯಾಣವನ್ನು ಬೆಂಗಳೂರು ಕಂಟೋನ್ಮೆಂಟ್ ಬಿಟ್ಟು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಎಸ್’ಎಂವಿಟಿ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ಮೂಲಕ ತಿರುಗಿಸಲಾಗುತ್ತದೆ
- ಅಕ್ಟೋಬರ್ 30ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06270 ಎಸ್’ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ಪ್ರಯಾಣವನ್ನು ಬೆಂಗಳೂರು ಕಂಟೋನ್ಮೆಂಟ್ ಬಿಟ್ಟು ಎಸ್’ಎಂವಿಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ಮೂಲಕ ತಿರುಗಿಸಲಾಗುತ್ತದೆ.
- ಅಕ್ಟೋಬರ್ 30ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16022 ಅಶೋಕಪುರಂ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಡೈಲಿ ಎಕ್ಸ್’ಪ್ರೆಸ್ ಪ್ರಯಾಣವನ್ನು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರಂ ಮೂಲಕ ತಿರುಗಿಸಲಾಗುತ್ತದೆ.
- ಅಕ್ಟೋಬರ್ 30ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06243 ಮೈಸೂರು-ಕರಾಯಿಕ್ಕುಡಿ ದ್ವಿವಾರ ಎಕ್ಸ್’ಪ್ರೆಸ್ ವಿಶೇಷ ಪ್ರಯಾಣವನ್ನು ಬೆಂಗಳೂರು ಕಂಟೋನ್ಮೆಂಟ್ ಬಿಟ್ಟು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ, ಎಸ್’ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೂಲಕ ತಿರುಗಿಸಲಾಗುತ್ತದೆ.
- ಅಕ್ಟೋಬರ್ 31ರಂದು ಪ್ರಾರಂಭವಾಗುವ ರೈಲು ಸಂಖ್ಯೆ 22135 ಮೈಸೂರು-ರೇಣಿಗುಂಟ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ಪ್ರಯಾಣವನ್ನು ಬೆಂಗಳೂರು ಕಂಟೋನ್ಮೆಂಟ್ ಬಿಟ್ಟು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ, ಎಸ್’ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಕೃಷ್ಣರಾಜಪುರ ಮತ್ತು ಜೋಲಾರಪೆಟೈ ಮೂಲಕ ತಿರುಗಿಸಲಾಗುತ್ತದೆ.
ಈ ಎಲ್ಲಾ ರೈಲುಗಳ ನಿಯಂತ್ರಣ:
- ಅಕ್ಟೋಬರ್ 28ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06240 ತಿರುನಲ್ವೇಲಿ-ಮೈಸೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ವಿಶೇಷ ಪ್ರಯಾಣವನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 16021 ಸಂಖ್ಯೆಯ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಅಶೋಕಪುರಂ ಕಾವೇರಿ ಡೈಲಿ ಎಕ್ಸ್’ಪ್ರೆಸ್, ಅ.30ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 75 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.
- 16220 ಸಂಖ್ಯೆಯ ತಿರುಪತಿ-ಚಾಮರಾಜನಗರ ಡೈಲಿ ಎಕ್ಸ್’ಪ್ರೆಸ್, ಅ.30 ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 45 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.
- 12657 ಸಂಖ್ಯೆಯ ಡಾ. ಎಂಜಿಆರ್ ಚೆನ್ನೆÊ ಸೆಂಟ್ರಲ್-ಕೆಎಸ್’ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್, ಅ.30ರಂದು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.

- 16521 ಸಂಖ್ಯೆಯ ಬಂಗಾರಪೇಟೆ-ಕೆಎಸ್’ಆರ್ ಬೆಂಗಳೂರು ಡೈಲಿ ಎಕ್ಸ್’ಪ್ರೆಸ್, 30.10.2025 ರಂದು ಪ್ರಾರಂಭವಾಗುವ ಪ್ರಯಾಣವನ್ನು ಬೈಯ್ಯಪ್ಪನಹಳ್ಳಿ ಮತ್ತು ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ, ಬೈಯ್ಯಪ್ಪನಹಳ್ಳಿಯಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
- 07339 ಸಂಖ್ಯೆಯ ಹುಬ್ಬಳ್ಳಿ-ಬೆಂಗಳೂರು ಡೈಲಿ ಎಕ್ಸ್’ಪ್ರೆಸ್ ವಿಶೇಷ ರೈಲು, ಅಕ್ಟೋಬರ್ 29ರಂದು ಪ್ರಾರಂಭವಾಗುವ ಪ್ರಯಾಣವನ್ನು ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು, ಯಶವಂತಪುರದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
- 07340 ಸಂಖ್ಯೆಯ ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ವಿಶೇಷ ರೈಲು, ಅಕ್ಟೋಬರ್ 30ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್’ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಗೊಳಿಸಲಾಗುವುದು, ಇದು ಕೆಎಸ್’ಆರ್ ಬೆಂಗಳೂರಿನ ಬದಲಿಗೆ ಯಶವಂತಪುರದಿAದ ಹೊರಡಲಿದೆ.
- 56520 ಸಂಖ್ಯೆಯ ಹೊಸಪೇಟೆ-ಕೆಎಸ್’ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲು, ಅಕ್ಟೋಬರ್ 30ರಂದು ಪ್ರಾರಂಭವಾಗುವ ಪ್ರಯಾಣವನ್ನು ಯಶವಂತಪುರ ಮತ್ತು ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು, ಯಶವಂತಪುರದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
- 17391 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಸಿಂಧನೂರು ಡೈಲಿ ಎಕ್ಸ್’ಪ್ರೆಸ್, ಅಕ್ಟೋಬರ್ 31ರಂದು ಪ್ರಾರಂಭವಾಗುವ ಪ್ರಯಾಣವನ್ನು ಕೆಎಸ್’ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಗೊಳಿಸಲಾಗುವುದು, ಇದು ಕೆಎಸ್’ಆರ್ ಬೆಂಗಳೂರಿನ ಬದಲಿಗೆ ಯಶವಂತಪುರದಿAದ ಹೊರಡುತ್ತದೆ.
ರೈಲುಗಳ ನಿಯಂತ್ರಣ
ಜೋಕಟ್ಟೆ ಮತ್ತು ತೋಕೂರು ನಡುವಿನ ಹಳಿ ದ್ವಿಗುಣಗೊಳಿಸುವಿಕೆ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post