ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೋಣನಕುಂಟೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಶ್ರೀಮಠದ ಕಾರ್ಯದರ್ಶಿ ಪಿ.ಎನ್. ಫಣಿ ಕುಮಾರ್ ಅವರ ನೇತೃತ್ವದಲ್ಲಿ, ವಿಶ್ವ ಮಾಧ್ವ ಮಹಾ ಪರಿಷತ್ ಬೆಂಗಳೂರು ಘಟಕದ ಸಂಚಾಲಕರಾದ ಮುಕ್ಕುಂದಿ ಶ್ರೀಕಾಂತ ಆಚಾರ್ಯ ಅವರ ಉಪಸ್ಥಿತಿಯಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಶದಲ್ಲಿ ಕಾಲ ಕಾಲಕ್ಕೆ ಮಳೆಯಾಗಿ ಸುಭಿಕ್ಷವಾಗಿ ಇರಲು ಮಹಾಭಾರತದ ವಿರಾಟ ಪರ್ವದ ಪ್ರವಚನ ಮಾಡುವುದು ನಮ್ಮ ಪರಂಪರಾಗತವಾದ ನಂಬಿಕೆ . ಅಂತೆಯೇ ಶ್ರೀ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಂಡಿತ ಶ್ರೀಕಾಂತ ಆಚಾರ್ಯ ಅವರಿಂದ ವಿರಾಟ ಪರ್ವದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post